ಬೆಂಗಳೂರು : ಜ್ಞಾನವ್ಯಾಪಿ ಮಸೀದಿ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು ಅವಹೇಳನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ 40 ವಕೀಲರ ಮೇಲೆ ರಾಮನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿರುವ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ನಲ್ಲಿ ಕಿಡಿ ಕಾರಿರುವ ಅವರು, ‘ದೇಶ ಭಕ್ತರ ಸೆರೆ – ವಿದ್ರೋಹಿಗಳ ಪೊರೆ’ ಎಂಬುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೀತಿಯಾಗಿದೆ.ಜ್ಞಾನವ್ಯಾಪಿ ಮಸೀದಿ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು ಅವಹೇಳನಮಾಡಿ ನ್ಯಾಯಾಂಗ ಹಾಗೂ ಸವಿಂಧಾನವನ್ನು ಧಿಕ್ಕರಿಸಿದ ರಾಷ್ಟ್ರ ವಿಧ್ವಂಸಕ ಮನಸ್ಥಿತಿಯ ಮತೀಯವಾದಿ ವಿದ್ರೋಹಿಯನ್ನು ಸ್ವಯಂ ದೂರು ದಾಖಲಿಸಿಕೊಂಡು ರಾಮನಗರ ಪೋಲಿಸರು ಬಂಧಿಸಿ ಕ್ರಮ ಕೈಗೊಳ್ಳಬೇಕಾಗಿತ್ತು.
ಶ್ರೀರಾಮನ ಕುರಿತು ಅವಹೇಳನ ಹೇಳಿಕೆ ವಿಚಾರ :ವಿಚಾರಣೆಗೆ ಹಾಜರಾಗುವಂತೆ ದೂರುದಾರ, ವಿಎಚ್ಪಿ ಮುಖಂಡನಿಗೆ ನೋಟಿಸ್
ಆದರೆ ಈ ಸಂಬಂಧ ವಕೀಲರ ಸಂಘ ದೂರು ನೀಡಿದರೂ ಆರೋಪಿಯನ್ನು ಬಂಧಿಸದೇ ಸ್ವಧರ್ಮೀಯ ಎಂಬ ಕಾರಣಕ್ಕೆ ಆರೋಪಿಯಿಂದಲೇ ದೂರು ಬರೆಸಿಕೊಂಡು
ವಕೀಲರ ಮೇಲೇ ದೂರು ದಾಖಲಿಸಿಕೊಂಡುಉದ್ಧಟತನ ಹಾಗೂ ಸ್ವಜನ ಪಕ್ಷಪಾತ ಮೆರೆದಿರುವ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ, ಈ ಕೂಡಲೇ ಈ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಬಂಧಿಸಿ ವಿಚಾರಣೆ ಆರಂಭಿಸಬೇಕಿದೆ.
ಬೆಳ್ಳಂ ಬೆಳಿಗ್ಗೆ ಮೆಟ್ರೋ ಪ್ರಯಾಣಿಕರಿಗೆ ಶಾಕ್ : ಬೈಯಪ್ಪನಹಳ್ಳಿ-ಗರುಡಾಚಾರ್ ಪಾಳ್ಯ ಮಧ್ಯ ಸಂಚಾರ ವ್ಯತ್ಯಯ
ದೇಶ ವಿರೋಧಿ ಆರೋಪಿತನ ರಕ್ಷಣೆಗೆ ನಿಂತ ಸಬ್ ಇನ್ಸಪೆಕ್ಟರ್ ತನ್ವೀರ್ ಹುಸೇನ್ ಬೆನ್ನ ಹಿಂದೆ ಯಾವುದಾದರೂ ಬಲಾಢ್ಯ ಶಕ್ತಿ ಇದ್ದು ಕುಮ್ಮಕ್ಕು ನೀಡಿರಲೇಬೇಕು, ಇಲ್ಲವಾದರೆ ನ್ಯಾಯಾಧೀಶರನ್ನೇ ಅವಹೇಳನ ಮಾಡುವ ದುಷ್ಟನ ರಕ್ಷಣೆಗೆ ನಿಲ್ಲಲು ಸಬ್ ಇನ್ಸಪೆಕ್ಟರ್ ಗೆ ಇಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ?
ಈ ಘಟನೆಯ ಹಿಂದೆ ಕಾಂಗ್ರೆಸ್ ಇಲ್ಲವೆನ್ನುವುದನ್ನು ರುಜುವಾತು ಪಡಿಸಲು ಈ ಕೂಡಲೇ ಈ ಘಟನೆಯ ಹಿಂದಿರುವ ಸತ್ಯ ಹೊರತೆಗೆಯಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲಿ. ಈ ಸಂಬಂಧ ನ್ಯಾಯೋಜಿತ ಬೇಡಿಕೆ ಇಟ್ಟು ಧರಣಿ ನಡೆಸುತ್ತಿರುವ ವಕೀಲರ ಹೋರಾಟವನ್ನು @BJP4Karnataka ಸಂಪೂರ್ಣವಾಗಿ ಬೆಂಬಲಿಸಲಿದೆ.
ಅನರ್ಹಗೊಂಡ ‘ಬಗರ್ ಹುಕುಂ’ ಅರ್ಜಿಗಳ ಮರು ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ
‘ದೇಶ ಭಕ್ತರ ಸೆರೆ – ವಿದ್ರೋಹಿಗಳ ಪೊರೆ’ ಎಂಬುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೀತಿಯಾಗಿದೆ.
ಜ್ಞಾನವ್ಯಾಪಿ ಮಸೀದಿ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು ಅವಹೇಳನ
ಮಾಡಿ ನ್ಯಾಯಾಂಗ ಹಾಗೂ ಸವಿಂಧಾನವನ್ನು ಧಿಕ್ಕರಿಸಿದ ರಾಷ್ಟ್ರ ವಿಧ್ವಂಸಕ ಮನಸ್ಥಿತಿಯ ಮತೀಯವಾದಿ ವಿದ್ರೋಹಿಯನ್ನು ಸ್ವಯಂ ದೂರು ದಾಖಲಿಸಿಕೊಂಡು ರಾಮನಗರ…— Vijayendra Yediyurappa (@BYVijayendra) February 19, 2024