ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದ ಬಳಿ ಪತನಗೊಂಡಿರುವ ಘಟನೆ ನಡೆದಿದೆ.
ಎಚ್ಎಎಲ್ ರುದ್ರ ಎಂದೂ ಕರೆಯಲ್ಪಡುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಹೆಲಿಕಾಪ್ಟರ್ ಮಿಗ್ಗಿಂಗ್ ಬಳಿ ಪತನಗೊಂಡಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Itanagar, Arunachal Pradesh | A military chopper crashed near singging village, 25 kms away from the Tuting headquarters in the Upper Siang district today. Site of accident not connected by road, rescue team sent. Further details awaited: Defence PRO, Guwahati pic.twitter.com/G2y7aEjQmT
— ANI (@ANI) October 21, 2022
ರುದ್ರ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿದ ದಾಳಿ ಹೆಲಿಕಾಪ್ಟರ್ ಆಗಿದೆ. ಇದು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ನ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ (WSI) Mk-IV ರೂಪಾಂತರವಾಗಿದೆ.
ಟುಟಿಂಗ್ ಹೆಡ್ ಕ್ವಾಟರ್ಸ್ನಿಂದ 25ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
BIGG NEWS: ಮೈಸೂರಿನಲ್ಲಿ 3 ದಿನಗಳಿಂದ ಭಾರೀ ಮಳೆಯ ಆರ್ಭಟ : ಚಾಮುಂಡಿಬೆಟ್ಟದ ನಂದಿಮಾರ್ಗದಲ್ಲಿ ಮತ್ತೆ ರಸ್ತೆಕುಸಿತ