ನಂಜನಗೂಡು : ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್ ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ ಕಟೀಲ್ ಹೇಳಿದರು.
ಜನವರಿ ವೇಳೆಗೆ ಅರ್ಕಾವತಿ ಪ್ರಕರಣ ಬೆಳಕಿಗೆ ಬರಲಿದೆ. ನಿಮಗೆ ತಾಕತ್ತಿದ್ದರೆ. ಶೇ. 40 ಕಮಿಷನ್ ಎಂಬ ಬಗ್ಗೆ ದಾಖಲೆ ನೀಡಿ ಎಂದು ಸವಾಲೆಸೆದರು.
ಸಿದ್ದರಾಮಯ್ಯ ಕಾಲದಲ್ಲಿ ಹಾಸಿಗೆ, ಮೊಟ್ಟೆಹಗರಣದ ಜೊತೆಗೆ ಎಸ್ಐ, ಶಿಕ್ಷಕರ ನೇಮಕಾತಿ ಹಗರಣವನ್ನು ಮುಚ್ಚಿ ಹಾಕಿದ್ದೀರಿ, ಅಲ್ಲದೆ ಜೈಲಿಗೆ ಹೋಗುತ್ತೇನೆ ಎಂಬ ಭಯದಿಂದ ಲೋಕಾಯುಕ್ತವನ್ನು ಮುಚ್ಚಿದರು. ಆದರೆ ಬಿಜೆಪಿ ಸರ್ಕಾರ ಎಸ್ಐ ಹಗರಣವನ್ನು ತನಿಖೆ ನಡೆಸಿ ಜೈಲಿಗೆ ಹಾಕುವ ಮೂಲಕ ಬೊಮ್ಮಾಯಿ ತಮ್ಮ ತಾಕತ್ತು ತೋರಿಸಿದ್ದಾರೆ ಎಂದು ಕಟೀಲ್ ಹೇಳಿದರು.
ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಕಾಂಗ್ರೆಸ್ ಸಂಚು – ಸಚಿವ ಆರ್.ಅಶೋಕ್