ಕೆಎನ್ಎನ್ಡಿಜಿಟಲ್ ಡೆಸ್ಕ್ : ದಕ್ಷಿಣ ಭಾರತದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ʼಗೆ ಇತ್ತೀಚೆಗೆ ಬಿಡುಗಡೆಯಾದ ‘ಪುಷ್ಪ’ ಸಿನಿಮಾ ಅವ್ರಿಗೆ ವಿಭಿನ್ನ ಜನಪ್ರಿಯತೆಯನ್ನ ತಂದುಕೊಟ್ಟಿದೆ. ಈಗ ಅರ್ಜುನ್ಗೆ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಅಭಿಮಾನಿಗಳ ದಂಡೇ ಇದೆ. ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪರೇಡ್ನಲ್ಲಿ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಅವರೊಂದಿಗೆ ಭಾಗವಹಿಸಿದಾಗ ಇದು ಮತ್ತೆ ಸಾಭೀತಾಗಿದೆ. ಅಲ್ಲೂ ಅಲ್ಲು ನೋಡಲು ಅಭಿಮಾನಿಗಳು ಜಮಾಯಿಸಿದ್ದರು.
ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪರೇಡ್ನ ಅನೇಕ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ನಟನನ್ನ ಗೌರವಿಸಲಾಗುತ್ತದೆ. ಈ ವೀಡಿಯೊಗಳಲ್ಲಿ ಒಂದು ನಿಮ್ಗೆ ಖುಷಿ ನೀಡುತ್ತೆ. ಇದ್ರಲ್ಲಿ ಅಲ್ಲು ಅರ್ಜುನ್ ಹೇಳುತ್ತಿರುವ ಡೈಲಾಗ್ ಕೇಳಿ ನೀವು ಹೆಮ್ಮೆ ಪಡುತ್ತೀರಿ. ಅಲ್ಲು ಅರ್ಜುನ್ ತನ್ನ ಪತ್ನಿಯೊಂದಿಗೆ ವೇದಿಕೆ ಮೇಲೆ ನಿಂತಿದ್ದು, ಅವರೊಂದಿಗೆ ಹೆಚ್ಚು ಜನರು ಕಾಣಿಸಿಕೊಂಡಿರುವುದು ವಿಡಿಯೋದಲ್ಲಿ ಕಾಣಬೋದು. ಆಗ ಅರ್ಜುನ ಭಾರತದ ತ್ರಿವರ್ಣ ಧ್ವಜವನ್ನ ಕೈಯಲ್ಲಿ ಹಿಡಿದು ‘ಪುಷ್ಪ’ ಶೈಲಿಯಲ್ಲಿ ‘ಇದು ಭಾರತದ ತ್ರಿವರ್ಣ, ಎಂದಿಗೂ ತಲೆಬಾಗುವುದಿಲ್ಲ’ ಎಂದು ಹೇಳುತ್ತಾರೆ. ಪುಷ್ಪಾ ಸ್ಟೈಲ್ನಲ್ಲಿ ಅರ್ಜುನ್ನ ಈ ಡೈಲಾಗ್ ಕೇಳಿ ಜನ ಚಪ್ಪಾಳೆ ತಟ್ಟಿದ್ದು, ಶಿಳ್ಳೆ ಹೊಡೆಯುತ್ತಾರೆ.
ವಿಡಿಯೋ ನೋಡಿ.!
"ये भारत का तिरंगा है , कभी झुकेगा नहीं " @alluarjun at #IndiaDayParade#NewYork #AlluArjun𓃵 #AlluArjun #Pushpa #PushpaTheRule #Pushpa2 #IndiaDayParade@amitbhatia1509 @aditiSBS@sanjayjourno @vikasbha
pic.twitter.com/GTCwhDka9W— Ketan Dixit (@rjketan) August 22, 2022
ಅಲ್ಲು ಅರ್ಜುನ್ ನೋಡಲು ನೂರಾರು ಜನ ಬಂದಿದ್ದರು..!
ಗ್ರ್ಯಾಂಡ್ ಮಾರ್ಷಲ್ ಬಿರುದು ಪಡೆದ ಪರೇಡ್ʼನಲ್ಲಿ ಅಲ್ಲು ಪತ್ನಿ ಸ್ನೇಹಾ ರೆಡ್ಡಿ ಜೊತೆ ಪಾಲ್ಗೊಂಡಿದ್ದರು. ಅಲ್ಲು ತನ್ನ ಪತ್ನಿಯೊಂದಿಗೆ ಜೀಪಿನಲ್ಲಿ ಕಾಣಿಸಿಕೊಂಡಿರುವ ಮತ್ತು ಕೈಯಲ್ಲಿ ತ್ರಿವರ್ಣ ಧ್ವಜವನ್ನ ಕಾಣುವ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಅಲ್ಲು ಬಿಳಿ ಬಣ್ಣದ ಸೂಟ್ನಲ್ಲಿ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದರೆ, ಸ್ನೇಹಾ ಹಳದಿ ಸೂಟ್ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.