ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ವಿಮಾನ ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆರಿಯಾನ ಅಫ್ಘಾನ್ ಏರ್‌ಲೈನ್ಸ್‌ಗೆ (Ariana Afghan Airlines) ಸೇರಿದ ವಿಮಾನವೊಂದು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ತಪ್ಪಿ ರನ್‌ವೇಯಿಂದ ಹೊರಬಂದಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ವಿಮಾನ: ಹೆರಾತ್‌ನಿಂದ ಕಾಬೂಲ್‌ಗೆ ಆಗಮಿಸುತ್ತಿದ್ದ ಬೋಯಿಂಗ್ 737-400 (ಫ್ಲೈಟ್ FG252).ಬುಧವಾರ ರಾತ್ರಿ (ಮಾರ್ಚ್ 25, 2026.ವಿಮಾನವು ರನ್‌ವೇ 29ರಲ್ಲಿ ಇಳಿಯುವಾಗ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿ ರನ್‌ವೇಯಿಂದ ಹೊರಬಂದು, ಹತ್ತಿರದ ಹುಲ್ಲಿನ ಪ್ರದೇಶದಲ್ಲಿ ನಿಂತಿದೆ. ವಿಮಾನದ ಎಡಭಾಗದ ರೆಕ್ಕೆಗೆ (Wing) ತುಸು ಹಾನಿಯಾಗಿದೆ ಎಂದು ವರದಿಯಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ವಿಮಾನ ನಿಲ್ದಾಣದ ತುರ್ತು ತಂಡಗಳು ಕಾರ್ಯಾಚರಣೆ ನಡೆಸಿವೆ. ವಿಮಾನದ ತುರ್ತು ನಿರ್ಗಮನ ಸ್ಲೈಡ್‌ಗಳ (Emergency Slides) ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನ ಸಂಚಾರ ಸ್ಥಗಿತಗೊಂಡಿತ್ತು.








