ಬೆಂಗಳೂರು : ಅಡಿಕೆ ಬೆಳೆಗಾರರ ನೆಮ್ಮದಿ ಕಸಿದುಕೊಂಡ ಮಾರಕ ಎಲೆ ಚುಕ್ಕೆ ರೋಗದಿಂದ ಜನರು ಆತಂಕಗೊಂಡಿದ್ದಾರೆ, ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ ಜಿಲ್ಲೆಯ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ.
ಎಲೆ ಚುಕ್ಕೆ ರೋಗದ ಕುರಿತು ಅಧ್ತಯನ ನಡೆಸಲು ಕೇಂದ್ರ ಸರ್ಕಾರ ರಚನೆ ಮಾಡಿರುವ ಏಳು ತಜ್ಞರ ಸಮಿತಿಯು ಈಗಾಗಲೇ ಸಭೆ ನಡೆಸಿದ್ದು, ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಪಶ್ವಿಮ ಘಟ್ಟದ ಶೃಂಗೇರಿ-ಕಳಸ ಭಾಗದಿಂದ ಸಹ್ಯಾದ್ರಿಯ ಆಗುಂಬೆ , ತೀರ್ಥಹಳ್ಳಿ, ಹೊಸನಗರ, ಶಿರಸಿ ಮುಂತಾದ ಭಾಗಗಳಲ್ಲಿ ಎಲೆಚುಕ್ಕಿ ರೋಗ ನಿರಂತರವಾಗಿ ಹರಡುತ್ತಿದೆ , ಈ ರೋಗಕ್ಕೆ ಔಷಧವಿಲ್ಲ ಎಂದು ಅಧ್ಯಯನದಿಂದ ಸಾಬೀತಾಗಿದೆ. ಆದ್ದರಿಂದ ಬೆಳೆಗಾರರು ಪರ್ಯಾಯ ಬೆಳೆಗಳತ್ತ ಗಮನ ನೀಡಬೇಕು. ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ರೈತರು ವಿಟ್ಲ ಸಿಪಿಸಿಆರ್ ಐ ನ ಅಂಗಾಂಶ ಕೃಷಿ ಅಡಕೆ ಬೆಳೆಗಳನ್ನು ಬೆಳೆಸಬಹುದು ಎಂದು ಅಡಕೆ , ಸಾಂಬಾರು ಬೆಳೆಗಳ ಅಭಿವೃದ್ದಿ ನಿರ್ದೇಶನಾಲಯದ ಅಧಿಕಾರಿ ಡಾ, ಹೋಮಿ ಚೆರಿಯನ್ ಕಲ್ಲಿಕೋಟೆ ಮಾಹಿತಿ ನೀಡಿದ್ದಾರೆ.
ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಬಗ್ಗೆ ಅಕ್ಟೋಬರ್ 19 ರಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಅಡಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದು ಇದಕ್ಕೆ ಔಷಧಿ ಕಂಡು ಹಿಡಿಯಲು ತಜ್ಞರ ಸಮಿತಿ ರಚಿಸುವಂತೆ ಕೋರಿತ್ತು,
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ, ರೈತ ಸಮುದಾಯದ ಜೀವನಾಡಿಯದ, ಅಡಿಕೆ ಬೆಳೆ, ಎಲೆ ಚುಕ್ಕೆ ರೋಗದಿಂದ, ನಲುಗಿ ಹೋಗಿದ್ದಾರೆ. ಮಲೆನಾಡು ಕೃಷಿಕ ವರ್ಗವನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ಹೆಮ್ಮಾರಿಯಾಗಿ ಅಡಕೆ ತೋಟವನ್ನು ನಾಶ ಮಾಡುತ್ತಿದೆ. ಕಷ್ಟಪಟ್ಟು ಸಾಲಸೂಲ ಮಾಡಿ ಅಡಕೆ ತೋಟ ಬೆಳೆಸಿದ ರೈತರಿಗೆ ಎಲೆಚುಕ್ಕೆ ರೋಗ ದೊಡ್ಡ ಕಂಟಕವಾಗಿದೆ.
Shocking : ನೋಯ್ಡಾದ ಜಿಲ್ಲಾ ಕಾರಾಗೃಹದ 26 ಕೈದಿಗಳಿಗೆ HIV ಸೋಂಕು | HIV positive for 26 prisoners
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ