ಬೆಂಗಳೂರು : ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಕೆಜೆ ಜಾರ್ ನಡುವೆ ವಾಕ್ಸಮರ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರ ನಡುವೆ ಮಾತಿನ ಗದ್ದಲ ಏರ್ಪಟ್ಟಿದೆ. ಏಕಾಏಕಿ ಸಚಿವ ಮಹದೇವಪ್ಪ ಸಿಡಿದಿದ್ದಾರೆ. ಮಹದೇವಪ್ಪ ಅಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಕಾರಣ ಏನೆಂದರೆ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವರ ನಡುವೆ ಜಟಾಪಟಿಯಾಗಿದೆ. ನಾನು ಎದ್ದು ಹೊರಟೆ ಬಿಡುತ್ತೇನೆ ಎಂದು ಸಚಿವ ಮಹಾದೇವಪ್ಪ ಕೂಗಾಡಿದ್ದಾರೆ. ಸಂಪುಟ ಸಭೆಯಲ್ಲಿ ಎಚ್ ಸಿ ಮಹದೇವಪ್ಪ ರೋಷಾವೇಷ ತಾಳಿದ್ದು SCSP & TSP ಹಣ ನೀಡದ ವಿಚಾರವಾಗಿ ಮಹದೇವಪ್ಪ ಕೂಗಾಡಿದ್ದಾರೆ. SCSP & TSP ಅನುದಾನ ಹಂಚಿಕೆ ಮಾಡಿದ್ದು ಯಾಕೆ? ಏನು ಅಂದುಕೊಂಡಿದ್ದೀರಿ? SCSP & TSP ಹಣ ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರು ಧ್ವನಿಯಲ್ಲಿ ಮಹದೇವಪ್ಪ ಆಕ್ರೋಶ ಹೊರಹಾಕಿದ್ದಾರೆ.
ನೇರವಾಗಿ ಸಿಎಂ ಸಿದ್ದರಾಮಯ್ಯಗೆ ಹೇಳದೆ ಸಂಪುಟ ಸಹೋದ್ಯೋಗಿಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ SCSP & TSP ಅನುದಾನದ ಬಗ್ಗೆ ಚರ್ಚೆ ನಡೆಯುತ್ತಿತ್ತು ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವರ ನಡುವೆ ಜಟಾಪಟಿ ಉಂಟಾಗಿದೆ. SCSP & TSP ಯೋಜನೆಗೆ ಆಯ್ಕೆಯಾದ ಎಸ್ ಸಿ ಎಸ್ ಟಿ ಫಲಾನುಭವಿಗಳಿಗೆ ಬೋರ್ವೆಲ್ ಕೊರೆಯಲು ಪಂಪ್ಸೆಟ್ ಸರಬರಾಜು ಮಾಡುವ ಗಂಗಾ ಕಲ್ಯಾಣ ಯೋಜನೆ ಕುರಿತು ಎರಡು ವರ್ಷಗಳಿಗೆ ವಿಸ್ತರಿಸಲು ಅನುಮೋದನೆ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು ಚರ್ಚೆ ಬೆಳೆ ಮಹದೇವಪ್ಪ ಕೆಜೆ ಜಾರ್ಜ್ ವಿರುದ್ಧ ಕೋಶ ವ್ಯಕ್ತಪಡಿಸಿದ್ದಾರೆ ಈ ವೇಳೆ ನಾನು ಎದ್ದು ಹೊರಟೆ ಬಿಡುತ್ತೇನೆ ಎಂದು ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.








