ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬ ಮಕ್ಕಳಿ ಹಾಲು ಕುಡಿಯುವುದು ಮುಖ ತಿರುಗಿಸುತ್ತಾರೆ. ಅದಲ್ಲದೆ ವಯಸ್ಕರು ಕೂಡ ದಿನವೂ ಒಂದು ಲೋಟ ಹಾಲು ಕುಡಿಯಿರಿ ಎಂದರು ಕುಡಿವುದಿಲ್ಲ. ಕೇಸರಿಯುಕ್ತ ಹಾಲು ಎಂದರೆ ರಾಗ ಎಳೆಯುವವರೇ ಹೆಚ್ಚು.
ಹಾಲಿನೊಂದಿಗೆ ನಮ್ಮ ಸಂಬಂಧ ಏನೇ ಇರಲಿ, ನಾವು ಬೆಳೆದಂತೆ, ನಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಹಾಲನ್ನು ಸೇರಿಸುವುದು ಎಷ್ಟು ನಿರ್ಣಾಯಕ ಎಂಬುದನ್ನು ಅರಿಯಬೇಕಿರುವುದು ತುಂಬ ಅವಶ್ಯ. ಹಾಲು ಕ್ಯಾಲ್ಸಿಯಂ ಮತ್ತು ರಂಜಕದ ಅತ್ಯುತ್ತಮ ಮೂಲವಾಗಿದೆ ಮತ್ತು ಆರೋಗ್ಯಕರ ಮೂಳೆ ಬೆಳವಣಿಗೆಗೆ ಸಹಾಯಕಾರಿ.ಹಾಲು ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಸಹ ಹೊಂದಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಚಳಿಗಾಲದ ಸಮಯವಾದ್ದರಿಂದ ಪ್ರತಿದಿನ ಒಂದು ಲೋಟ ಹಾಲನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮು ನಮ್ಮ ಹತ್ತಿರ ಸುಳಿಯದಂತೆ ಮಾಡಬಹುದು.
ನಾವು ಮನೆಯಲ್ಲಿಯೇ ರುಚಿಕರವಾದ ಕೇಸರಿಯುಕ್ತ ಹಾಲು ಮಾಡಬಹುದಾಗಿದ್ದು, ಅದರ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಕೇಸರಿ ಉತ್ಕರ್ಷಣ ನಿರೋಧಕಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಪೊಟ್ಯಾಶಿಯಮ್ ಸಮೃದ್ಧವಾಗಿದ್ದು, ನೆನಪು ಮತ್ತು ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಡಿಕೆ ಪಬ್ಲಿಷಿಂಗ್ನ ‘ಹೀಲಿಂಗ್ ಫುಡ್ಸ್’ ಪುಸ್ತಕದ ಪ್ರಕಾರ, ಕೇಸರಿಯು ಕ್ರೋಸಿನ್, ಸಫ್ರಾನಾಲ್ ಮತ್ತು ಪಿಕ್ರೋಕ್ರೋಸಿನ್ನಂತಹ ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ.
ಕೇಸರಿಯಲ್ಲಿ ಕಂಡುಬರುವ ಸಕ್ರಿಯ ಸಂಯುಕ್ತ ಕ್ರೋಸೆಟಿನ್, ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿ ಎನ್ನಲಾಗಿದೆ. ರಕ್ತ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು, ಕೇಸರಿಯು ದೊಡ್ಡ ಪ್ರಮಾಣದಲ್ಲಿ ತಡೆಯುತ್ತದೆ. ಆದ್ದರಿಂದ, ಹಾಲು ಮತ್ತು ಕೇಸರಿ ಎರಡರ ಅತ್ಯುತ್ತಮ ಪ್ರಯೋಜನಗಳನ್ನು ನಾವು ಪಡೆಯಬೇಕು.