ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಾಫಿ ಕುಡಿಯೋದನ್ನು ಒಂದಷ್ಟು ಜನರು ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಬೆಡ್ಕಾಫಿ ಕುಡಿಯೋ ಅಭ್ಯಾಸ ಇದ್ದರೆ ಎಚ್ಚರದಿಂದ ಇರೋದು ಅಗ್ಯಗತ್ಯವಾಗಿದೆ. ಇದರಿಂದ ಒಂದಲ್ಲ ಒಂದು ದಿನ ಆನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ..
ಬೆಳಗಿನ ಸಮಯದಲ್ಲಿ ಎದ್ದ ತಕ್ಷಣ ಕಾಫಿ ಕುಡಿಯೋವವರ ದೇಹದಲ್ಲಿ ಮೆಟಬಾಲಿಸಂ ಸರಿಯಾಗಿ ನಡೆಯುವುದಿಲ್ಲ ಮತ್ತು ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣದಿಂದ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಯು ಇದೆ. ರಕ್ತದಲ್ಲಿನ ಗ್ಲುಕೋಸ್ ಪ್ರಮಾಣದ ಮೇಲೆ ಇದು ಪ್ರಭಾವ ಬೀರುತ್ತದೆ
ಈ ಬಗ್ಗೆ ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಅಧ್ಯಯನ ತಂಡ ಸುಮಾರು 29 ಆರೋಗ್ಯಕರ ಪುರುಷರನ್ನು ಮತ್ತು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ ಮೂರು ದಿನಗಳ ಕಾಲ ನಿದ್ರಾಹೀನತೆ ಉಂಟಾಗುವಂತೆ ಮಾಡಿ ಬೆಳಗಿನ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿದರು.
ಇಲ್ಲಿ ತಿಳಿದು ಬಂದ ಒಂದು ವಿಚಾರ ಅಂದರೆ ಯಾರು ಬೆಳಗ್ಗೆ ಬೇಗ ಎದ್ದಿದ್ದರು ಮತ್ತು ಅವರಲ್ಲಿ ಯಾರು ಬೆಡ್ ಕಾಫಿ ಮತ್ತು ಬ್ಲಾಕ್ ಕಾಫಿ ಕುಡಿದಿದ್ದರು ಅವರಲ್ಲಿ ಉಂಟಾದ ವ್ಯತ್ಯಾಸವನ್ನು ಕಂಡು ಹಿಡಿಯಲಾಯಿತು . ಬೆಡ್ ಕಾಫಿ ಕುಡಿದ ಜನರಲ್ಲಿ ಬ್ಲಡ್ ಶುಗರ್ ಏರಿಕೆ ಕಂಡುಬಂದಿದ್ದು ಬ್ಲಾಕ್ ಕಾಫಿ ಕುಡಿದವ ರಲ್ಲಿ ನಾರ್ಮಲ್ ಲೆವೆಲ್ ಶುಗರ್ ಇದ್ದ ಬಗ್ಗೆ ಮಾಹಿತಿ ಸಿಕ್ಕಿತು.
ಇದರ ಜೊತೆಗೆ ನಿದ್ರಾಹೀನತೆ ಕೂಡ ಇದ್ದರೆ ಅದರಿಂದ ಬೇರೆ ಬಗೆಯ ಆರೋಗ್ಯ ತೊಂದರೆಗಳು ಎದುರಾಗುತ್ತದೆ ಜತೆಗೆ ಡಯಾಬಿಟಿಸ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಅಧ್ಯಯನ ಮಾಹಿತಿಯೊಂದು ಬಹಿರಂಗವಾಗಿದೆ