ಬೆಂಗಳೂರು: ಅನೇಕ ಸಂದರ್ಭದಲ್ಲಿ ಹೆಲ್ಮೆಟ್ ಜೀವ ರಕ್ಷಕ. ಬೈಕ್ ಸವಾರನ ಅಂಗರಕ್ಷಕನಾಗಿ ಕೆಲಸ ಮಾಡುತ್ತೆ. ಆದ್ರೇ ಕೆಲವರು ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕೋದೇ ಇಲ್ಲ. ಅದೊಂದು ಥರ ಫ್ಯಾಷನ್ ಕೂಡ ಆಗಿಬಿಟ್ಟಿದೆ. ಹಾಗೆ ನೀವು ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಓಡಿಸುತ್ತಿದ್ದರೇ, ತಪ್ಪದೇ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ರಸ್ತೆಯ ಬಳಿಯಲ್ಲಿ ಮಹೆಳೆಯೊಬ್ಬರು ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಅವರಿಗೆ ವೇಗವಾಗಿ ಬಂದಂತ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದಿದೆ. ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ತಕ್ಷಣ ಬೈಕ್ ನಲ್ಲಿ ತೆರಳುತ್ತಿದ್ದಂತ ಮಹಿಳೆ ಆಯ ತಪ್ಪಿ ಕೆಳಗೆ ಬಿದ್ದರೇ, ಅವರ ತಲೆಯ ಮೇಲೆಯೇ ಲಾರಿ ಹರಿದಿದೆ.
ಲಾರಿ ಚಕ್ರ ಮಹಿಳೆಯ ತಲೆಯ ಮೇಲೆ ಹರಿದ ಪರಿಣಾಮ, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಒಂದು ವೇಳೆ ಮಹಿಳೆ ಬೈಕ್ ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸಿದ್ದೇ ಆದರೇ, ಜೀವ ಉಳಿಯುತ್ತಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕೆಂಗೇರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋ ಬೈಕ್ ನಲ್ಲಿ ತೆರಳೋರೇ ತಪ್ಪದೇ ಹೆಲ್ಮೆಟ್ ಧರಿಸಿ. ಅಪಘಾತದಂತ ಸಂದರ್ಭದಲ್ಲಿ ನಿಮ್ಮ ತಲೆಯನ್ನು ರಕ್ಷಿಸಲಿದೆ. ಈ ಮೂಲಕ ಎಚ್ಚರಿಕೆ ವಹಿಸಿ ಎಂಬುದೇ ನಮ್ಮ ಕಳಕಳಿ ಕೂಡ ಆಗಿದೆ.
ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್: ಈ ಯೋಜನೆಯಡಿ ‘ಉಚಿತ ಕಣ್ಣಿನ ತಪಾಸಣೆ’, ಕನ್ನಡಕ ವಿತರಣೆ