ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಸೌಂದರ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಚರ್ಮದ ಸಮಸ್ಯೆಯಲ್ಲಿ ಹೈಪರ್ ಪಿಗ್ಮೆಂಟೇಶನ್ ಕೂಡಾ ಒಂದು. ಚರ್ಮದ ಕೋಶಗಳಲ್ಲಿ ಮೆಲನಿನ್, ಅಧಿಕವಾಗಿ ಉತ್ಪಾದನೆ ಆಗುವುದರಿಂದ ಪಿಗ್ಮೆಂಟೇಶನ್ ಉಂಟಾಗುತ್ತದೆ.
BIGG NEWS: ಹಾಸನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಚಿನ್ನದ ಸರ ಖದೀಮರು
ಇದನ್ನು ಕನ್ನಡದಲ್ಲಿ ಬಂಗು ಎಂದು ಕರೆಯುತ್ತಾರೆ. ಇದರಿಂದ ಚರ್ಮ ಕಪ್ಪು ಬಣ್ಣಕ್ಕೆ ತಿರುತ್ತದೆ. ಅದರಲ್ಲೂ ಇದು ಮುಖದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಕೀಳರಿಮೆ ಭಾವನೆ ಕಾಡುತ್ತದೆ.ಅರಿಶಿನ: ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಅರಿಶಿನ ಬಹಳ ಪ್ರಯೋಜನಕಾರಿ. ಅರಿಶಿನವು ಅದ್ಭುತ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ತುಂಬಾ ಸಹಕಾರಿ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಮೊಡವೆ, ಟ್ಯಾನ್ ಸೇರಿದಂತೆ ಮೊದಲಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕಡ್ಲೆಹಿಟ್ಟು, ಅರಿಶಿನ ಮತ್ತು ಸ್ವಲ್ಪ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಕ್ರಮೇಣವಾಗಿ ಕಡಿಮೆ ಆಗುತ್ತದೆ.
BIGG NEWS: ಹಾಸನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಚಿನ್ನದ ಸರ ಖದೀಮರು
ಅಲೋವೆರಾ: ಇದು ಕೂಡಾ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಒಳ್ಳೆಯದು. ಕೂದಲಿನ ಸಮಸ್ಯೆಗೂ ಇದು ಪರಿಣಾಮಕಾರಿ. ಅಲೊವೆರಾ ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ಇದು ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಅಲೊವೇರಾ ಜೆಲ್ ಬಳಸುವ ಬದಲಿಗೆ ಅಲೊವೆರಾ ಸಸ್ಯದ ಚಿಕ್ಕ ತುಂಡಿನಿಂದ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ಬಂಗು ಇರುವ ಜಾಗಕ್ಕೆ ಅಲೊವೆರಾ ಹಚ್ಚಿ. ರಾತ್ರಿ ಹಚ್ಚಿ ಒಂದೆರಡು ನಿಮಿಷ ಮಸಾಜ್ ಮಾಡಿ ಬೆಳಗ್ಗೆ ತೊಳೆದರೆ ಕ್ರಮೇಣ ಬಂಗು ಕಡಿಮೆಯಾಗುತ್ತದೆ.
BIGG NEWS: ಹಾಸನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಚಿನ್ನದ ಸರ ಖದೀಮರು
ಹಾಲು, ಮೊಸರು: ಚರ್ಮದ ಸಮಸ್ಯೆಗೆ ಹಾಲು ಮತ್ತು ಮೊಸರು ಕೂಡ ಒಳ್ಳೆಯದು. ತ್ವಚೆಯ ಮೇಲೆ ಹಾಲು ಅಥವಾ ಮೊಸರು ಹಚ್ಚುವುದರಿಂದ ಚರ್ಮವು ಮೃದುವಾಗಿ ಹೊಳಪು ಪಡೆದುಕೊಳ್ಳುತ್ತದೆ. ಪಿಗ್ಮೆಂಟೇಶನ್ ಸಮಸ್ಯೆಯನ್ನು ಹೋಗಲಾಡಿಸಲು ಕೂಡಾ ಸಹಾಯ ಮಾಡುತ್ತದೆ. ಒಂದು ಚಮಚ ಕಡ್ಲೆಹಿಟ್ಟು, ಅರಿಶಿನ, ಹಸಿ ಹಾಲನ್ನು ಮಿಕ್ಸ್ ಮಾಡಿ. ಇದನ್ನು ಸಮಸ್ಯೆ ಇರುವ ಕಡೆಗೆ ಹಚ್ಚಿ 20 ನಿಮಿಷ ಬಿಡಿ. ನಂತರ ಮೃದುವಾಗಿ ಮಸಾಜ್ ಮಾಡಿ ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ಗಮನಿಸಬಹುದು.
ನಿಂಬೆರಸ: ನಿಂಬೆಯಿಂದ ಕೂಡಾ ಬಂಗಿನ ಸಮಸ್ಯೆ ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಸಮಸ್ಯೆಯನ್ನು ದೂರ ಮಾಡುತ್ತದೆ. ಆದರೆ ಆಸಿಡ್ ಅಂಶ ಇರುವುದರಿಂದ ನಿಂಬೆ ರಸವನ್ನು ನೀವು ನೇರವಾಗಿ ಮುಖದ ಮೇಲೆ ಹಚ್ಚಬಾರದು. ಆದ್ದರಿಂದ ಇದರೊಂದಿಗೆ ಜೇನುತುಪ್ಪ, ಬಾದಾಮಿ ಎಣ್ಣೆ, ರೋಸ್ ವಾಟರ್ ಅಥವಾ ಇನ್ನಿತರ ವಸ್ತುಗಳನ್ನು ಸೇರಿಸಿ ಮಿಕ್ಸ್ ಮಾಡಿ ನಂತರ ಬಂಗು ಇರುವ ಜಾಗಕ್ಕೆ ಹಚ್ಚಬಹುದು.
ಆಲೂಗಡ್ಡೆ: ಇದು ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಇದು ಚರ್ಮಕ್ಕೆ ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸುತ್ತದೆ. ಚರ್ಮದ ಟ್ಯಾನ್ ತೆಗೆಯಲು ಇದು ಬಹಳ ಉಪಯುಕ್ತವಾಗಿದೆ, ಆಲೂಗಡ್ಡೆ, ಚರ್ಮವನ್ನು ಕಪ್ಪಾಗದಂತೆ ಮಾಡುತ್ತದೆ. ಆಲೂಗಡ್ಡೆ ಬಳಸುವುದರಿಂದ ತ್ವಚೆ ತಿಳಿಯಾಗುತ್ತದೆ. ಆಲೂಗಡ್ಡೆ ರಸವನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು.