ಶಿವಮೊಗ್ಗ: ಅಪ್ರಾಪ್ತ ಬಾಲಕಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಂತ ಬಾಲಕಿಯನ್ನು ಮದುವೆ ಮಾಡಿಸಿದಂತ ಪೋಷಕರು, ಸಂಬಂಧಿಕರು, ಮದುವೆ ಮಾಡಿಸಿದಂತ ಅರ್ಚಕ, ಮದುವೆ ಪೋಟೋ ತೆಗೆದ ಪೋಟೋಗ್ರಾಫರ್ ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

BREAKING NEWS: ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಅನುಮತಿ | Corbevax booster shot

ಹೌದು.. ಶಿವಮೊಗ್ಗ ತಾಲೂಕಿನ ಸಂತೆ ಕಡೂರು ಗ್ರಾಮದಲ್ಲಿರುವಂತ ಬಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜುಲೈ.31ರಂದು ದ್ವಿತೀಯ ಪಿಯುಸಿ ಓದುತ್ತಿದ್ದಂತ ಅಪ್ರಾಪ್ತ ಬಾಲಕಿಯನ್ನು ಪೋಷಕರು, ಸಂಬಂಧಿಕರು ಸೇರಿ ಮದುವೆ ಮಾಡಿದ್ದರು. ಅಲ್ಲದೇ ಮರು ದಿನ ಬೀಗರ ಊಟ ಕೂಡ ಹಮ್ಮಿಕೊಂಡಿದ್ದರು.

Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!…

ಈ ಮಾಹಿತಿಯನ್ನು ಆಧರಿಸಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದರು. ಮದುವೆ ಮಾಡಿಸಿದ್ದಂತ ಬಾಲಕಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ಮಾಹಿತಿಯನ್ನು ಪಡೆದಿದ್ದರು.

BIGG NEWS : ಭಾರೀ ಮಳೆಗೆ ಶ್ರೀರಂಗಪಟ್ಟಣ ʻಮಹಾರಾಜರ ಛತ್ರ ಮುಳುಗಡೆ ʼ : ಪಶ್ವಿಮ ವಾಹಿನಿಯಲ್ಲಿ ʼಅಸ್ತಿ ವಿಸರ್ಜನೆಗೂ ನಿರ್ಬಂಧʼ

ಸಂಬಂಧಿಯನ್ನು ಪ್ರೀತಿಸುತ್ತಿದ್ದಂತ ವಿಷಯ ತಿಳಿದು ವಿಧಿಯಿಲ್ಲದೇ ಒಪ್ಪಿ ಬಾಲಕಿಯ ಪೋಷಕರು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದರು. ಹೀಗೆ ಅಪ್ರಾಪ್ತೆಯಾಗಿದ್ದಂತ ಬಾಲಕಿಗೆ ಮದುವೆ ಮಾಡಿಸಿದಂತ ತಂದೆ-ತಾಯಿ, ಮದುವೆಯಾದ ಹುಡುಗ, ಅವರ ಚಿಕ್ಕಪ್ಪ-ಚಿಕ್ಕಮ್ಮ, ಮದುವೆ ಮಾಡಿಸಿದಂತ ಪುರೋಹಿತ, ಅಡುಗೆ ಭಟ್ಟ, ಲಗ್ನಪತ್ರಿಕೆ ಮುದ್ರಿಸಿದಂತ ಪ್ರಿಂಟರ್ಸ್ ಮಾಲೀಕ, ಮದುವೆ ಪೋಟೋ ತೆಗೆದಂತ ಪೋಟೋಗ್ರಾಫರ್ ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಮೂಲಕ ಬಾಲಕಿಯನ್ನು ಮದುವೆ ಮಾಡಿಸಿದವರಿಗೆ ಬಿಗ್ ಶಾಕ್ ನೀಡಿದ್ದಾರೆ.

Share.
Exit mobile version