ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವೊಮ್ಮೆ ಜನರು ಗೊಂದಲ, ಆತಂಕ ಮತ್ತು ಭಯದಿಂದ ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಈ ಅಭ್ಯಾಸವಿರುವವರು ಯಾವುದೇ ಒತ್ತಡದಲ್ಲಿ ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಇದರಿಂದ ಉಗುರುಗಳು ಒಡೆಯುತ್ತವೆ ಮತ್ತು ಅನೇಕ ತೊಂದರೆಗಳು ಉಂಟಾಗುತ್ತವೆ. ಹಾಗಿದ್ರೆ, ನಿಮಗೂ ಉಗುರುಗಳನ್ನ ಕಚ್ಚುವ ಅಭ್ಯಾಸವಿದ್ದರೆ ನೀವು ಯಾವ ರೀತಿಯ ಸಮಸ್ಯೆಗಳನ್ನ ಎದುರಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
ಹೆಚ್ಚಿನ ಜನರು ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಸಾಮಾನ್ಯವಾಗಿ ಇದಕ್ಕೆ ಕಾರಣ ಆತಂಕ ಅಥವಾ ಹೆದರಿಕೆ. ಆದ್ರೆ, ಕೆಲವರು ಇದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟಿರ್ತಾರೆ. ಕೆಲವರು ತಮ್ಮ ಉಗುರುಗಳನ್ನ ಕಚ್ಚುತ್ತಾ ತಮ್ಮ ಭಾವನೆಗಳನ್ನ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಇದು ವಿವಿಧ ದೈಹಿಕ ಸಮಸ್ಯೆಗಳನ್ನ ಉಂಟುಮಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ನಿಮ್ಮ ಉಗುರುಗಳನ್ನ ಕಚ್ಚುವ ಅಭ್ಯಾಸವನ್ನು ತಪ್ಪಿಸಿ.
ಉಗುರು ಕಚ್ಚುವುದರಿಂದ ದೇಹದ ಮೇಲೆ ಆಗುವ ಕೆಟ್ಟ ಪರಿಣಾಮಗಳು!
ಉಗುರು ಕಚ್ಚುವಿಕೆಯು ಉಗುರು ರಚನೆಯನ್ನು ಹಾನಿಗೊಳಿಸುತ್ತದೆ. ಇನ್ನು ನಿಮ್ಮ ಉಗುರುಗಳನ್ನ ಕಚ್ಚುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ.
ಉಗುರು ಕಚ್ಚುವುದರಿಂದ ಬಾಯಿಯಲ್ಲಿರುವ ಒಸಡುಗಳಿಗೆ ಹಾನಿಯಾಗುತ್ತದೆ. ಇದಷ್ಟೇ ಅಲ್ಲದೇ ಉಗುರು ಕಚ್ಚುವುದರಿಂದ ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆಯಾಗಲು ಕಾರಣವಾಗುತ್ತದೆ. ಇದು ಆರೋಗ್ಯಕರವಲ್ಲ ಅಂದರೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಉಗುರು ಕಚ್ಚುವುದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.
ಉಗುರುಗಳನ್ನ ಕಚ್ಚುವುದ್ರಿಂದ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ದೇಹವನ್ನ ಪ್ರವೇಶಿಸುತ್ತವೆ ಮತ್ತು ಉಗುರಿನ ಕೊಳೆ ಬಾಯಿಯಲ್ಲಿ ಶೇಖರಗೊಳ್ಳುತ್ತವೆ. ಇನ್ನೀದು ಶೀತ ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನ ಉಂಟು ಮಾಡುತ್ತದೆ. ಉಗುರು ಕಚ್ಚುವುದರಿಂದ ಕರುಳಿನ ಕ್ಯಾನ್ಸರ್ ಕೂಡ ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
BREAKING : ‘ನಿಖರವಾದ ದಾಳಿ’ : ಬೈರುತ್’ನಲ್ಲಿರುವ ‘ಹಿಜ್ಬುಲ್ಲಾ ಕೇಂದ್ರ ಕಚೇರಿ’ ಮೇಲೆ ಇಸ್ರೇಲ್ ದಾಳಿ
ಶಿವಮೊಗ್ಗ: ಕಾರ್ಗಲ್ ಪೊಲೀಸ್ ಠಾಣೆಗೆ ನೂತನ ವಾಹನ ಹಸ್ತಾಂತರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
BREAKING : ‘IDFC ಲಿಮಿಟೆಡ್’ ಜೊತೆಗೆ ‘IDFC ಫಸ್ಟ್ ಬ್ಯಾಂಕ್’ ವಿಲೀನ, ಅಕ್ಟೋಬರ್ 1 ರಿಂದ ಜಾರಿ!