ಬೆಂಗಳೂರು : ನಾಳೆ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಫೈನಲಿಸ್ಟ್ಗಳು ಕನ್ಫರ್ಮ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ಬಿಗ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಒಂದು ವೇಳೆ ನಾಳೆ ಬೆಂಗಳೂರು ಏನಾದರೂ ಪಂಜಾಬ್ ವಿರುದ್ಧ ಪಂದ್ಯ ಗೆದ್ದು ಚೊಚ್ಚಲ ಕಪ್ ಗೆದ್ದಿದ್ದೆ ಆದಲ್ಲಿ, RCB ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಹಮ್ಮಿಕೊಳ್ಳಲಾಗಿದೆ. ಈ ಸಲ ಕಪ್ ನಮ್ದು ಆದರೆ ಒನ್ ಡೇ ಪಾನಿಪುರಿ ನಿಮ್ದು ಎಂದು ಬೋರ್ಡ್ ಹಾಕಿದ್ದಾರೆ.
ಹೌದು ಈ ಸಲ ಆರ್ಸಿಬಿ ಕಪ್ ಗೆದ್ದಿದ್ದೇ ಆದರೆ ಎಲ್ಲರಿಗೂ ಪಾನಿಪೂರಿ, ಮಸಾಲಪೂರಿ, ಭೇಲ್ ಪುರಿ ಫುಲ್ ಫ್ರೀ ಎಂದು ಅಂಗಡಿ ಮುಂದೆ ಬೋರ್ಡ್ ಹಾಕಿದ್ದಾರೆ. ಅಂಗಡಿ ಮಾಲೀಕ ಕೂಡ ಆರ್ಸಿಬಿ ದೊಡ್ಡ ಅಭಿಮಾನಿಯಾಗಿದ್ದು, ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಈ ಉಚಿತ ಚಾಟ್ಸ್ ವಿತರಣೆ ಎಂದಿದ್ದಾರೆ.