ಕೆಎನ್ ಎನ್ ನ್ಯೂಸ್ ಡೆಸ್ಕ್ : ನವೆಂಬರ್ 26 ರಿಂದ ನವರಾತ್ರಿ ಶುರುವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ನವರಾತ್ರಿ ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಕೆಲವರು ಉಪವಾಸ ಕೂಡಾ ಇರುತ್ತಾರೆ. ಆದರೆ ಈ ಉಪವಾಸದ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಿ.
ಅತಿಯಾಗಿ ಕಾಫಿ-ಟೀ ಕುಡಿಯಬೇಡಿ
ನೀವು ನವರಾತ್ರಿ ಉಪವಾಸ ಮಾಡುತ್ತಿದ್ದರೆ, ದಿನವಿಡೀ ಚಹಾ ಮತ್ತು ಕಾಫಿ ಸೇವಿಸುತ್ತಾ ಇರಬೇಡಿ. ಇದು ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಉಪವಾಸದ ಸಮಯದಲ್ಲಿ ಲಿಕ್ವಿಡ್ ಡಯಟ್ ಮಾಡಬೇಕೆಂದರೆ ನೀರು, ಹಣ್ಣಿನ ರಸ, ಲಸ್ಸಿ, ಎಳನೀರು, ನಿಂಬೆರಸ ಅಥವಾ ಹಾಲು ಕುಡಿಯಬೇಕು.
ಸಕ್ಕರೆ ಪಾನೀಯಗಳು ಬೇಡ
ಉಪವಾಸದ ಸಮಯದಲ್ಲಿ, ಜನರು ಸಾಮಾನ್ಯವಾಗಿ ಸೋಡಾ, ಕಾಫಿ, ಟೀ, ನಿಂಬೆ ಶರಬತ್ತು ಅಥವಾ ಐಸ್ ಟೀಗಳನ್ನು ಸೇವಿಸುತ್ತಾರೆ. ಈ ಪಾನೀಯಗಳ ಸೇವನೆಯಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ.
ಉಪವಾಸದ ಸಮಯದಲ್ಲಿ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ ಉಪ್ಪು ಅಥವಾ ಸಕ್ಕರೆ ರಹಿತ ಮಜ್ಜಿಗೆ, ನಿಂಬೆ ಶರಬತ್ತು, ಗ್ರೀನ್ ಟೀ, ಪುದೀನ ನೀರು, ಕಾರ್ಡಮಮ್ ಟೀ, ಸ್ಮೂಥಿಗಳು ಮತ್ತು ಎಳನೀರಿನಂತ ಕಡಿಮೆ ಕ್ಯಾಲೋರಿ ಪಾನೀಯಗಳನ್ನು ಸೇವಿಸಿ.