ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಮಹಿಳೆಯರು ಸೌಂಧರ್ಯ ಕಾಣಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಹಾಗೇ ಕಣ್ಣಿನ ಅಂದವನ್ನು ಇಮ್ಮಡಿಗೊಳಿಸಲು ಐ ಲೈನರ್ ಬಳಸುತ್ತಾರೆ.
ಆದರೆ ಐ ಲೈನರ್ಗಳನ್ನು ಹೆಚ್ಚಾಗಿ ಬಳಸುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅನೇಕ ವೈದ್ಯರು ಎಚ್ಚರಿಸಿದ್ದಾರೆ. ಇಷ್ಟಾದರೂ ಅನೇಕ ಮಹಿಳೆಯರು ಇಂತಹ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಪ್ರತಿದಿನ ಐಲೈನರ್ ಬಳಸುತ್ತಾರೆ.
ಐಲೈನರ್ ಹಚ್ಚುವವರಲ್ಲಿ ಕೆಲವರು ಉತ್ತಮ ಕಂಪನಿಯ ಪ್ರಾಡಕ್ಟ್ಗಳನ್ನು ಬಳಸುತ್ತಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಇದರ ಬಗ್ಗೆ ಅರಿವು ಇಲ್ಲದೆ, ಕಳಪೆ ಗುಣಮಟ್ಟದ ಲೈನರ್ ಬಳಸಿ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೇ ಐಲೈನರ್ಗಳನ್ನು ಬಳಸಿದ ನಂತರ ಅವುಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ಗೊಂದಲ ಅನೇಕರಿಗೆ ಇದೆ. ಆದರೆ ಐ ಲೈನರ್ಗಳನ್ನು ಬಳಸುವುದು ಮಾತ್ರವಲ್ಲದೆ ಅವುಗಳನ್ನು ತೆಗೆಯುವುದು ಹೇಗೆ ಎಂಬುದನ್ನು ಕೂಡಾ ತಿಳಿಯುವುದು ಉತ್ತಮ.
ಸೂಕ್ತ ವಿಧಾನದ ಮೂಲಕ ನಾವು ಐ ಲೈನರ್ ತೆಗೆದರೆ ಮಾತ್ರ, ನಾವು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಸರಿಯಾಗಿ ಐ ಲೈನರ್ ತೆಗೆಯದಿದ್ದರೆ ಖಂಡಿತ ಸಮಸ್ಯೆ ಎದುರಾಗಬಹುದು. ಕೊನೆಗೆ ಅಂಧತ್ವ ಕೂಡಾ ಕಾಡಬಹುದು.
ವಾಟರ್ಲೈನ್ನಲ್ಲಿ ಲಿಕ್ವಿಡ್ ಐಲೈನರ್ ಹಚ್ಚುವುದರಿಂದ ಕಣ್ಣುಗಳಿಗೆ ಹಾನಿಯಾಗುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ಐ ಲೈನರ್ ಬಳಸುವವರು ಮಲಗುವ ಮುನ್ನ ಕಣ್ಣಿನಲ್ಲಿರುವ ಸರಿಯಾಗಿ ಐ ಲೈನರ್ ತೆಗೆದು ಮಲಗಬೇಕು. ನಮ್ಮ ಬಳಿ ಕಣ್ಣಿನ ಸಮಸ್ಯೆ ಎಂದು ಬರುವ ಅನೇಕ ಮಹಿಳೆಯರಲ್ಲಿ ಹೆಚ್ಚಿನ ಜನರು ಐ ಲೈನರ್ ಬಳಸುವವರು ಎಂದು ಖ್ಯಾತ ಐ ಡಾಕ್ಟರ್ ಒಬ್ಬರು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ವಾಟರ್ ಲೈನ್ಗೆ ಐ ಲೈನರ್ ಹಚ್ಚಬಾರದು. ಕಣ್ಣಿನ ವಾಟರ್ ಲೈನ್ ಸುತ್ತಲೂ ಪ್ರಮುಖ ಗ್ರಂಥಿಗಳಿವೆ. ಈ ಗ್ರಂಥಿಗಳು ನಮ್ಮ ಕಣ್ಣುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಉಪಯುಕ್ತವಾದ ತೈಲಗಳನ್ನು ಉತ್ಪಾದಿಸುತ್ತವೆ. ಆ ಜಾಗದಲ್ಲಿ ಐಲೈನರ್ ಹಚ್ಚಿದರೆ ಗ್ರಂಥಿಗಳಿಗೆ ಹಾನಿಯಾಗುವ ಸಂಭವವಿದೆ. ಈ ಕಾರಣಕ್ಕಾಗಿಯೇ ವಾಟರ್ ಲೈನ್ನಲ್ಲಿ ಐ ಲೈನರ್ಗಳನ್ನು ಹಚ್ಚಬಾರದು ಎಂದು ನೇತ್ರ ತಜ್ಞರು ಹೇಳುತ್ತಾರೆ.