ನವದೆಹಲಿ: ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ( Central Reserve Police Force – CRPF ) 1458 ಸಹಾಯಕ ಸಬ್-ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್), ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಿದೆ. ಇದರಲ್ಲಿ 143 ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು 1315 ಹೆಡ್ ಕಾನ್ಸ್ಟೆಬಲ್ ಹುದ್ದೆಗಳಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು.
ಇನ್ನು ಪುರುಷರಿಗೆ 165 ಸೆಂ.ಮೀ ಎತ್ತರ ಮತ್ತು ಮಹಿಳೆಯರಿಗೆ 155 ಸೆಂ.ಮೀ ಎತ್ತರ ಇರಬೇಕು. ಅಭ್ಯರ್ಥಿಗಳ ವಯಸ್ಸು ಜನವರಿ 25, 2023 ರಂತೆ 18 ರಿಂದ 25 ವರ್ಷಗಳ ನಡುವೆ ಇರಬೇಕು.
ಅರ್ಹ ಅಭ್ಯರ್ಥಿಗಳು ಜನವರಿ 25, 2023 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅಪ್ಲಿಕೇಶನ್ಗಳು ಜನವರಿ 4, 2023 ರಿಂದ ಪ್ರಾರಂಭವಾಗುತ್ತವೆ. ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ 100 ರೂಪಾಯಿ ಅರ್ಜಿ ಶುಲ್ಕವನ್ನ ಪಾವತಿಸಬೇಕು. SC/ST/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಅನ್ವಯಿಸುತ್ತದೆ.
ಅಂತಿಮ ಆಯ್ಕೆಯು ಆನ್ಲೈನ್ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವಿವರವಾದ ವೈದ್ಯಕೀಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿರುತ್ತದೆ. ಲಿಖಿತ ಪರೀಕ್ಷೆಯು ಫೆಬ್ರವರಿ 22 ರಿಂದ 28 ರವರೆಗೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಎಸ್ಐ ಹುದ್ದೆಗಳಿಗೆ ಮಾಸಿಕ 29,200 ರೂಪಾಯಿಂದ 92,300 ರೂಪಾಯಿ ಮತ್ತು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ 25,500 ರಿಂದ 81,100 ರೂಪಾಯಿ ಪಾವತಿಸಲಾಗುತ್ತದೆ. ಇತರ ಮಾಹಿತಿಯನ್ನ ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಲಿಖಿತ ಪರೀಕ್ಷೆಯ ವಿಧಾನ.!
ಒಂದೂವರೆ ಗಂಟೆ ಅವಧಿಯಲ್ಲಿ 100 ಅಂಕಗಳಿಗೆ ಒಟ್ಟು 100 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳು. ಹಿಂದಿ/ಇಂಗ್ಲಿಷ್ ಭಾಷೆ, ಜನರಲ್ ಆಪ್ಟಿಟ್ಯೂಡ್, ಜನರಲ್ ಇಂಟೆಲಿಜೆನ್ಸ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಭಾಗಗಳಿಂದ ಪ್ರಶ್ನೆಗಳು ಬರುತ್ತವೆ. ನೆಗೆಟಿವ್ ಮಾರ್ಕಿಂಗ್ ಇರುತ್ತದೆ. ಪ್ರಶ್ನೆ ಪತ್ರಿಕೆ ಇಂಗ್ಲಿಷ್/ಹಿಂದಿ ಭಾಷೆಗಳಲ್ಲಿ ಮಾತ್ರ ಇರುತ್ತದೆ.
ಸಂಪೂರ್ಣ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ https://crpf.gov.in/recruitment-details.htm?246/AdvertiseDetail ಗೆ ಭೇಟಿ ನೀಡಿ.