ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪ್ರತಿಯೊಂದು ಗಿಡಕ್ಕೂ ವಿಶೇಷವಾದ ಔಷಧೀಯ ಗುಣವಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದು ನಿಜವಾಗಿದ್ದರೂ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂದಿನ ದಿನಗಳಲ್ಲಿಯೂ ಜನ ತಮ್ಮ ಮನೆಯ ಹೊರಾಂಗಣದಲ್ಲಿ ಗಿಡಗಳನ್ನ ಬೆಳೆಸಲು ಇಷ್ಟಪಡುತ್ತಾರೆ. ಹಾಗೆ ಬೆಳೆಸಿದ ಗಿಡಗಳಲ್ಲಿ ಔಷಧೀಯ ಗುಣಗಳಿದ್ರೆ, ನೀವು ಕೇಳಿದ್ದು ಸರಿ, ಸೌಂದರ್ಯಕ್ಕಾಗಿ ನಾವು ಹೊರಾಂಗಣದಲ್ಲಿ ಬೆಳೆಸುವ ಗಿಡಗಳಲ್ಲಿ ಅದ್ಭುತವಾದ ಆಯುರ್ವೇದ ಗುಣಗಳಿವೆ. ಅದುವೇ ಕಾಡುಬಸಳೆ ಸಸ್ಯ. ಈ ಸಸ್ಯದ ವೈಜ್ಞಾನಿಕ ಹೆಸರು Bryophyllum pinatum. ಈ ಸಸ್ಯವನ್ನ ಆಯುರ್ವೇದದಲ್ಲಿ ಹಲವು ವರ್ಷಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಔಷಧಿಯಾಗಿ ಬಳಸಲಾಗುತ್ತಿದೆ. ಈ ಸಸ್ಯವು ಅನೇಕ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳನ್ನ ಹೊಂದಿದೆ.
ಕಾಡುಬಸಳೆ ಸಸ್ಯದ ಆರೋಗ್ಯ ಪ್ರಯೋಜನಗಳು.!
* ನೀವು ಕಾಡುಬಸಳೆ ಸಸ್ಯಗಳ ಎಲೆಗಳು ಮತ್ತು ಕಾಂಡಗಳೊಂದಿಗೆ ಚಹಾ ಮಾಡಿ ಸೇವಿಸಿದರೆ, ಸೆಳೆತ ಮತ್ತು ಅಸ್ತಮಾದಂತಹ ಸಮಸ್ಯೆಗಳನ್ನ ತಪ್ಪಿಸಬಹುದು.
* ಕಾಡುಬಸಳೆ ಗಿಡಗಳು ದಪ್ಪ ಎಲೆಗಳನ್ನ ಹೊಂದಿರುತ್ತವೆ. ತಿಂದಾಗ ಹುಳಿ ಅನ್ನಿಸುತ್ತದೆ. ಎಲೆಗಳನ್ನ ಸ್ವಚ್ಛಗೊಳಿಸಿ ನೇರವಾಗಿ ತಿನ್ನುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೀಗೆ ತಿನ್ನಲು ಆಗದವರು ಕಾಡುಬಸಳೆ ಗಿಡದ ನಾಲ್ಕು ಎಲೆಗಳನ್ನ ಕಾಲು ಲೀಟರ್ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿದರೆ ಒಳ್ಳೆಯ ಲಾಭಗಳಿವೆ.
* ಬೆನ್ನುನೋವು ಮತ್ತು ತಲೆನೋವಿನಿಂದ ಬಳಲುತ್ತಿರುವವರು ಈ ಗಿಡದ ಎಲೆಗಳಿಂದ ಪೇಸ್ಟ್ ತಯಾರಿಸಿ ಮುಲಾಮು ರೀತಿ ಹಚ್ಚಿಕೊಳ್ಳೊದು ಒಳ್ಳೆಯದು.
* ಮೊಡವೆ ಸಮಸ್ಯೆ ಇರುವವರು ಈ ಗಿಡದ ಎಲೆಗಳನ್ನ ಕಾಳುಮೆಣಸಿನ ಜೊತೆಗೆ ತಿಂದರೆ ಅದ್ಭುತವಾದ ಲಾಭವನ್ನ ಪಡೆಯಬಹುದು.
* ಆಯುರ್ವೇದ ತಜ್ಞರ ಪ್ರಕಾರ, ಕಾಡುಬಸಳೆ ಗಿಡದ ಎಲೆಗಳ ರಸವನ್ನ ಕುಡಿಯುವುದರಿಂದ ಹೊಟ್ಟೆಯ ಹುಣ್ಣು ಕಡಿಮೆಯಾಗುತ್ತದೆ.
* ಈ ಎಲೆಗಳ ರಸವನ್ನ ಬೆಳಿಗ್ಗೆ ಮತ್ತು ಸಂಜೆ ಎರಡು ಚಮಚ ಕುಡಿಯುವುದರಿಂದ ಜಾಂಡೀಸ್ ನಿವಾರಣೆಯಾಗುತ್ತೆ.
* ದೇಹದ ಮೇಲೆ ಊತ ಮತ್ತು ಮೂಗೇಟುಗಳು ಇರುವಲ್ಲಿ ಈ ಗಿಡದ ಎಲೆಗಳ ಪೇಸ್ಟ್’ನ್ನ ಬಟ್ಟೆಯಲ್ಲಿ ಹಾಕಿ ಬ್ಯಾಂಡೇಜ್ ಮಾಡಿದರೆ ಸಮಸ್ಯೆ ದೂರವಾಗುತ್ತದೆ.
* ಈ ಎಲೆಗಳ ರಸವನ್ನ ನೇರವಾಗಿ ಕಿವಿಗೆ ಹಚ್ಚಿದರೆ ನೋವು ಶಮನವಾಗುತ್ತದೆ.
* ಮಹಿಳೆಯರು ಈ ಎಲೆಗಳ ರಸವನ್ನ ಸಾಕಷ್ಟು ಪ್ರಮಾಣದ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ 40 ರಿಂದ 50 ಮಿಲೀ ಸೇವಿಸಿದರೆ ಯೋನಿ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
* ಈ ಎಲೆಗಳ ರಸವನ್ನ ಕಣ್ಣಿನ ಸುತ್ತ ಮುಲಾಮು ರೀತಿ ಹಚ್ಚುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ.
ಸಂಗತಿಗಳ ಮಧ್ಯೆ ಹುಳಿ ಹಿಂಡುತ್ತಿದ್ಯಂತೆ ‘ಸ್ಮಾರ್ಟ್ ಫೋನ್’ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ