ಬೆಂಗಳೂರು : ಮಹಿಳೆ ವಿರುದ್ಧ ಶಾಸಕ ಅರವಿಂದ ಲಿಂಬಾವಳಿ ದರ್ಪ ಪ್ರಕರಣ ಸಂಬಂಧಿಸಿ ದೂರುದಾರ ಮಹಿಳೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಮಾಡಿದ್ದಾರೆ.
ದೂರುದಾರ ಮಹಿಳೆ ಕಾಂಗ್ರೆಸ್ ಕಾರ್ಯಕರ್ತೆ ರೂತ್ ಸಯಾಗ್ ಮೇರಿ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತೆ ಠಾಣೆಗೆ ದೂರು ನೀಡುವಂತೆ ಡಿಕೆಶಿ ಸೂಚನೆ ನೀಡಿದ್ದಾರೆ