ಬೆಂಗಳೂರು : PSI ಅಕ್ರಮದಿಂದ ಸಂತ್ರಸ್ತರಾದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ ತುಮಕೂರು ಡಿವೈಎಸ್ಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಆರಗ ಜ್ಞಾನೇಂದ್ರ ಅವರೇ, ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ? ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ ಎಂದು ಕಿಡಿಕಾರಿದೆ.
ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು. ಗೃಹ ಸಚಿವರೇ , ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ? ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳ nhಷ್ಟೇ, ನೆನಪಿರಲಿ.
PSI ಹಗರಣದಿಂದ ಸಂತ್ರಸ್ತರಾಗಿರುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎದುರುಗೊಳ್ಳಲು, ಅವರ ನೋವು ಆಲಿಸಲು ಧೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ ಆತಗ ಜ್ಞಾನೇಂದ್ರ ಅವರೇ? ಅಕ್ರಮ ನಡೆಸಿದ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ ಆದರೆ ಶಿಕ್ಷೆ ಮಾತ್ರ ಅಭ್ಯರ್ಥಿಗಳಿಗೆ. ಅವರು ಉದ್ಯೋಗ ಕೇಳುತ್ತಿದ್ದಾರೆ ಹೊರತು ನಿಮ್ಮ ಕುರ್ಚಿಯನ್ನಲ್ಲ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು.@JnanendraAraga ಅವರೇ, ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ?
ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ. pic.twitter.com/Xls7y2sVYD
— Karnataka Congress (@INCKarnataka) November 1, 2022
PSI ಅಕ್ರಮದಿಂದ ಸಂತ್ರಸ್ತರಾದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ ತುಮಕೂರು ಡಿವೈಎಸ್ಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು.@JnanendraAraga ಅವರೇ, ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ?
ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ.
— Karnataka Congress (@INCKarnataka) November 1, 2022
PSI ಹಗರಣದದಿಂದ ಸಂತ್ರಸ್ತರಾಗಿರುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎದುರುಗೊಳ್ಳಲು, ಅವರ ನೋವು ಆಲಿಸಲು ಧೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ @JnanendraAraga ಅವರೇ?
ಅಕ್ರಮ ನಡೆಸಿದ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ ಆದರೆ ಶಿಕ್ಷೆ ಮಾತ್ರ ಅಭ್ಯರ್ಥಿಗಳಿಗೆ.
ಅವರು ಉದ್ಯೋಗ ಕೇಳುತ್ತಿದ್ದಾರೆ ಹೊರತು ನಿಮ್ಮ ಕುರ್ಚಿಯನ್ನಲ್ಲ. pic.twitter.com/zOuy8hova7
— Karnataka Congress (@INCKarnataka) November 1, 2022