ಬೆಂಗಳೂರು : ಇಂದು ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯಾಗಿ ಇಂದಿಗೆ ಮೂರು ವರ್ಷ. ಅವರ ನೆನಪು ಕನ್ನಡಿಗರಲ್ಲಿ ಅಷ್ಟೆ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ನೆನಪು ಅಚ್ಚಳಿಯದೆ ಉಳಿದಿದೆ.ಇದೆ ವೇಳೆ ಪುನೀತ್ ರಾಜ್ ಕುಮಾರ್ ಸ್ಮಾರಕಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ,ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ. ಅಪ್ಪುನ ಅಷ್ಟು ಬೇಗ ಮರೆಯೋಕೆ ಆಗಲ್ಲ. ಶೂಟಿಂಗ್ ಹೋದರೂ ಎಲ್ಲೇ ಇದ್ದರೂ ಪುನೀತ್ ನೆನಪಾಗುತ್ತಲೇ ಇರುತ್ತಾನೆ. ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ. ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ. ನಾನು ಈ ಜಾಗಕ್ಕೆ ಬರಬೇಕು ಅಂತ ಏನೂ ಇಲ್ಲ. ಈ ಜಾಗದಲ್ಲಿ ಒಂದು ಪಾಸಿಟಿವ್ ವೈಬ್ ಇದೆ ಎಂದಿದ್ದಾರೆ.
2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ನಿಧನರಾದರು. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 3 ವರ್ಷವಾಗಿದೆ. ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಅವರು ಮಕ್ಕಳು, ಕುಟುಂಬಸ್ಥರು ಇಂದು ಪೂಜೆ ಸಲ್ಲಿಸಲಿದ್ದಾರೆ.