ಬೆಂಗಳೂರು : ಕನ್ನಡ ಚಿತ್ರರಂಗದ ಕಣ್ಮಣಿ ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಸರಿ ಸುಮಾರು ವರ್ಷವೇ ಕಳೆದಿದೆ. ಅಕ್ಟೋಬರ್ 29 ರಂದು ಬೆಳಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಇನ್ನೂ ಕೂಡ ಈ ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಅವರು ಮಾಡಿರುವ ಹಲವು ಸಮಾಜ ಸೇವೆ ಕಾರ್ಯಗಳು ಬೆಳಕಿಗೆ ಬಂದಿದೆ. ಪುನೀತ್ ನಿಧನದ ಬಳಿಕ ಅವರ ಮಾಡಿರುವ ಕೆಲಸವನ್ನು ಸ್ಪೂರ್ತಿಯಾಗಿಸಿಕೊಂಡು ಹಲವರು ಹಲವು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿನಪಿನಲ್ಲಿ ಗಣಿ ನಾಡು ಬಳ್ಳಾರಿಯಲ್ಲಿ ಕೃಷ್ಣ ಶಿಲೆಯಲ್ಲಿ ಅಪ್ಪು ಅದ್ಭುತವಾದ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯ ತಾಳೂರ ರಸ್ತೆಯ ಕುರುವಳ್ಳಿ ಎನ್ ಕ್ಲೈವ್ನಲ್ಲಿ ಸ್ಥಾಪಿಸಲಾಗಿರುವ ಪುನೀತ್ ರಾಜ್ಕುಮಾರ್ ಕಪ್ಪು ಶಿಲೆ ಪ್ರತಿಮೆ ಅನಾವರಣಗೊಂಡಿದೆ. ಪುನೀತ್ ರಾಜ್ಕುಮಾರ್ ಅವರ ಪ್ರತಿಮೆಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾವುಕರಾದರು, ಅಪ್ಪು ಜೊತೆಗಿನ ಒಟನಾಟ ಹಂಚಿಕೊಂಡರು.
ಕುರುವಳ್ಳಿ ಎನ್ಕ್ಲೈವ್ನಲ್ಲಿ ಜಿಆರ್ಆರ್ ಡೆವಲಪರ್ ಮುಖ್ಯಸ್ಥ ಸುನೀಲ್ ಕುಮಾರ್, ಪುನೀತ್ ರಾಜ್ಕುಮಾರ್ ಪ್ರತಿಮೆ ಹಾಗೂ ಉದ್ಯಾನವನವನ್ನು ನಿರ್ಮಿಸಿದ್ದಾರೆ. ಅಪ್ಪು ಪ್ರತಿಮೆ ಅನಾವರಣ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಗಣ್ಯರು ಸೇರಿ ನೂರಾರು ಅಪ್ಪು ಅಭಿಮಾನಿಗಳು ನೆರೆದಿದ್ದರು.
BREAKING NEWS: ಸಿಎಂ ಅಂಗಳಕ್ಕೆ ಬಸವಲಿಂಗ ಶ್ರೀ ಕೇಸ್; ವೀರಶೈವ ಮುಖಂಡರಿಂದ ಬೊಮ್ಮಾಯಿ ಭೇಟಿ