ಬೆಂಗಳೂರು : ಕನ್ನಡ ಚಿತ್ರರಂಗದ ಕಣ್ಮಣಿ ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷವೇ ಕಳೆದಿದೆ. ಆದರೂ ಸಹ ಪುನೀತ್ ಸಮಾಧಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.
ಇಂದು ಗ್ರಹಣದ ದಿನವೂ ಕೂಡ ಅಪಾರ ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಸಮಾಧಿ ವೀಕ್ಷಣೆಗೆ ಬಂದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ನಮನ ಸಲ್ಲಿಸಿ ಹೋಗುತ್ತಿರುವ ದೃಶ್ಯ ಇಂದು ಕಂಡು ಬಂದಿದೆ. ಸೂರ್ಯಗ್ರಹಣದ ಹಿನ್ನೆಲೆ ಇಂದು ರಾಜ್ಯದ ಹಲವು ದೇವಾಲಯಗಳು ಬಂದ್ ಆಗಿದೆ, ಈ ಕಾರಣಕ್ಕಾಗಿ ಅಪ್ಪು ಸಮಾಧಿಗೆ ಜನರು ಭೇಟಿ ನೀಡುತ್ತಿದ್ದಾರೆ.
ಅಕ್ಟೋಬರ್ 29 ರಂದು ಬೆಳಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಇನ್ನೂ ಕೂಡ ಈ ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಬಹುಷಃ ಪುನೀತ್ ರಾಜ್ ಕುಮಾರ್ ಅವರ ಸಾವಿಗೆ ಮಿಡಿದಷ್ಟು ಮನಗಳು ಇಡೀ ದೇಶದಲ್ಲಿ ಯಾರ ಸಾವಿಗೆ ಮಿಡಿಯಲಿಲ್ಲ ಎನ್ನಬಹುದು.
BREAKING NEWS : ಬ್ರಿಟನ್ ಪ್ರಧಾನಿಯಾಗಿ ‘ರಿಷಿ ಸುನಕ್’ ನೇಮಕ |Rishi Sunak Appointed Britain’s PM