ಬೆಂಗಳೂರು: : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರು, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹಾಯಕ ಜಿಲ್ಲಾ ಸಂಯೋಜನಕರ ಹುದ್ದೆಗೆಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರ ಹುದ್ದೆಗೆ ಅರ್ಥಶಾಸ್ತ್ರ, ಬ್ಯಾಂಕಿಂಗ್ , ಇತರೆ ವಿಭಾಗಗಳಲ್ಲಿ ಪದವೀಧರರು, ಸ್ನಾತಕೋತ್ತರ ಪದವಿ ಹೊಂದಿದವರಿಗೆ ಅದ್ಯತೆ. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹಾಯಕ ಜಿಲ್ಲಾ ಸಂಯೋಜನಕರ ಹುದ್ದೆಗೆ ಕಂಪ್ಯೂಟರ್/ಐಟಿ ಇತ್ಯಾದಿಗಳಲ್ಲಿ ಕೆಲಸ ಮಾಡುವ ಜ್ಞಾನದೊಂದಿಗೆ ಪದವಿ ಹೊಂದಿರಬೇಕು. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರ (Resume) ವನ್ನು ಎಲ್ಲಾ ದಾಖಲೆಗಳೊಂದಿಗೆ ನವೆಂಬರ್ 23 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26578688 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಣದ ಮೇಲೆ ಹಣ ಮಾಡಿದ ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಜನ ಭಯದಲ್ಲಿ ಬದುಕು ಸಾಗಿಸುತ್ತಿದ್ದರು: DKS