ಬಳ್ಳಾರಿ : ಜಿಪಂ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ವೃತ್ತಿನಿರತ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಭಾಗದ ವೃತ್ತಿನಿರತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಉಚಿತವಾಗಿ 192 ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಲು ಉದ್ದೇಶಿಸಲಾಗಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿಗಳನ್ನು ಆನ್‌ಲೈನ್ ವೆಬ್‌ಸೈಟ್ ballari.nic.in ಗೆ ಭೇಟಿ ನೀಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 06 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಬಳ್ಳಾರಿ-ಮೊ.9035547140, ಸಂಡೂರು-ಮೊ.9844200579, ಜಿಪಂ ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕರ ಮೊ.9901313417 ಗೆ ಸಂಪರ್ಕಿಸಬಹುದು ಎಂದು ಜಿಪಂ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Good News: ‘ಹೊಲಿಗೆ ತರಬೇತಿ’ಗಾಗಿ ಅರ್ಜಿ ಆಹ್ವಾನ: ತರಬೇತಿ ಬಳಿಕ ‘ಉಚಿತ ವಿದ್ಯುತ್ ಚಾಲಿತ ಯಂತ್ರ’ ವಿತರಣೆ
ಸಿಲಿಕಾನ್ ಸಿಟಿ ಜನರೇ ಎಚ್ಚರ.! ಇನ್ಮುಂದೆ ಬೆಂಗಳೂರು ವಿವಿ ಆವರಣದಲ್ಲಿ ಕಸ ಹಾಕಿದ್ರೆ ಬೀಳುತ್ತೆ ದಂಡ