ನವದೆಹಲಿ : ಭಾರತ ಏಷ್ಯಾ ಕಪ್ ಪಂದ್ಯಾವಳಿಗೆ ಪಾಕಿಸ್ತಾನಕ್ಕೆ ಬರದಿದ್ರೆ, ಏಕದಿನ ವಿಶ್ವಕಪ್ ಪಂದ್ಯಾವಳಿಗೆ ನಾವು ಭಾರತಕ್ಕೆ ಬರುವುದಿಲ್ಲ ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ರಮೀಜ್ ರಾಜಾ ಹೇಳಿಕೆಗೆ ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಖಡಕ್ ಉತ್ತರ ನೀಡಿದ್ದಾರೆ. ಇನ್ನು ಕಳೆದ ವರ್ಷ ಪಾಕಿಸ್ತಾನ ಹೇಗೆ ಎರಡು ಬಾರಿ ಭಾರತವನ್ನ ಸೋಲಿಸಿತು.? ಪಾಕಿಸ್ತಾನದ ಪಾಲ್ಗೊಳ್ಳುವಿಕೆಯಿಲ್ಲದೇ ಯಾರೂ ವಿಶ್ವಕಪ್ ವೀಕ್ಷಿಸುವುದಿಲ್ಲ ಎಂದು ಜಂಬ ಕೊಚ್ಚಿಕೊಂಡಿದ್ದ ರಮೀಜ್’ಗೆ ಮಾತಿನ ಮೂಲಕವೇ ಸಚಿವರು ಬಿಸಿ ಮುಟ್ಟಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ರಮೀಜ್ ರಾಜಾ, “ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾಗವಹಿಸದಿದ್ದರೆ, ಅದನ್ನ ಯಾರು ನೋಡುತ್ತಾರೆ? ನಾವು ಸ್ಪಷ್ಟ ನಿಲುವನ್ನ ಹೊಂದಿದ್ದೇವೆ, ಭಾರತ ತಂಡವು ಇಲ್ಲಿಗೆ ಬಂದರೆ ನಾವು ವಿಶ್ವಕಪ್ ಗೆ ಹೋಗುತ್ತೇವೆ. ಇನ್ನು ನಾವು ಇಲ್ಲದೇ ಅವ್ರು ವಿಶ್ವಕಪ್ ಆಡಬಹುದು. ಆದ್ರೆ, ನಾವು ಆಕ್ರಮಣಕಾರಿ ವಿಧಾನವನ್ನ ಅಳವಡಿಸಿಕೊಳ್ಳುತ್ತೇವೆ” ಎಂದಿದ್ದಾರೆ.
“ನಮ್ಮ ತಂಡವು ಪ್ರದರ್ಶನವನ್ನ ತೋರಿಸುತ್ತಿದೆ. ನಾವು ಪಾಕಿಸ್ತಾನ ಕ್ರಿಕೆಟ್’ನ ಆರ್ಥಿಕತೆಯನ್ನು ಸುಧಾರಿಸಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಇನ್ನು ನಾವು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಅದು ಸಂಭವಿಸುತ್ತದೆ. 2021ರ ಟಿ20 ವಿಶ್ವಕಪ್ನಲ್ಲಿ ನಾವು ಭಾರತವನ್ನು ಸೋಲಿಸಿದ್ದೇವೆ. ಟಿ20 ಏಷ್ಯಾ ಕಪ್’ನಲ್ಲಿ ನಾವು ಭಾರತವನ್ನು ಸೋಲಿಸಿದ್ದೇವೆ. ಒಂದು ವರ್ಷದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ಬಿಲಿಯನ್ ಡಾಲರ್ ಎಕಾನಮಿ ತಂಡವನ್ನ ಎರಡು ಬಾರಿ ಸೋಲಿಸಿತು,” ಎಂದು ರಮೀಜ್ ರಾಜಾ ಹೇಳಿದ್ದಾರೆ.
ರಮೀಜ್ ರಾಜಾ ಅವ್ರ ಪ್ರಚೋದನಕಾರಿ ಹೇಳಿಕೆಗಳಿಗೆ ಬಿಸಿಸಿಐ ಇನ್ನೂ ಪ್ರತಿಕ್ರಿಯಿಸಿಲ್ಲ. ಆದ್ರೆ, ಈ ಮಧ್ಯೆ, ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತವನ್ನ ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. “ಸರಿಯಾದ ಸಮಯಕ್ಕಾಗಿ ಕಾಯಿರಿ. ಭಾರತವು ಕ್ರೀಡಾ ಜಗತ್ತಿನಲ್ಲಿ ಪ್ರಮುಖ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನ ಕಡೆಗಣಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಕ್ರೀಡಾ ಸಚಿವರು ತಿಳಿಸಿದರು.
ಅಂದ್ಹಾಗೆ, ಕಳೆದ ತಿಂಗಳು, ಮುಂಬೈನಲ್ಲಿ ಬಿಸಿಸಿಐನ 91ನೇ ಎಜಿಎಂ ನಂತ್ರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ‘ಏಷ್ಯಾ ಕಪ್ 2023 ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
“ಪಾಕಿಸ್ತಾನಕ್ಕೆ ಭೇಟಿ ನೀಡುವ ನಮ್ಮ ತಂಡದ ಅನುಮತಿಯ ಬಗ್ಗೆ ಸರ್ಕಾರವೇ ನಿರ್ಧರಿಸುತ್ತದೆ, ಆದ್ದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಏಷ್ಯಾ ಕಪ್ ಪಂದ್ಯಾವಳಿಯನ್ನ ತಟಸ್ಥ ಸ್ಥಳದಲ್ಲಿ ನಡೆಸಬೇಕು” ಎಂದು ಮುಂಬೈನಲ್ಲಿ ಬಿಸಿಸಿಐನ 91ನೇ ಎಜಿಎಂ ನಂತರ ಶಾ ಹೇಳಿದ್ದರು.
BIGG NEWS : ಬಾಣಂತಿ ಡಿಸ್ಚಾರ್ಜ್ಗೆ ಲಂಚದ ಬೇಡಿಕೆಯಿಟ್ಟ ವಿಡಿಯೋ ವೈರಲ್ : ಇಬ್ಬರು ವೈದ್ಯ ಸಿಬ್ಬಂದಿ ಅಮಾನತು
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದುಬೈಗೆ ತೆರಳಲು ಕೋರ್ಟ್ ಅನುಮತಿ
ಪುರುಷರೇ ಎಚ್ಚರ..! 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ʼಹೃದಯಘಾತ, ಪಾರ್ಶ್ವವಾಯು ಸಮಸ್ಯೆʼ ಹೆಚ್ಚಳ: ಅಧ್ಯಯನ