ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಸೆಕ್ಷನ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
BREAKING NEWS: ಮಂಕಿಪಾಕ್ಸ್ ಹೆಚ್ಚಳದಿಂದ ಯುಎಸ್ ನಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಆದೇಶ ಹೊರಡಿಸಿದ್ದಾರೆ.ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಸಂಕಷ್ಟ ಎದುರಾಗಿದೆ.
BREAKING NEWS: ಮಂಕಿಪಾಕ್ಸ್ ಹೆಚ್ಚಳದಿಂದ ಯುಎಸ್ ನಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
ನವ್ಯಶ್ರೀ ದೂರಿನಂತೆ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ ಮಾಡಿಸಿದ್ದು, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ವಿವಿಧ ಸೆಕ್ಷನ್ ಹಾಗೂ ಆ್ಯಕ್ಟ್ಗಳಡಿ ಎಫ್ಐಆರ್ ದಾಖಲಾಗಿದೆ.