ಚಿಕ್ಕಬಳ್ಳಾಪುರ : ಕಾಂಗ್ರೆಸ್ನವರ ರಕ್ತದಲ್ಲಿ ಅವರ ಡಿಎನ್ಎನಲ್ಲೇ ಹಿಂದೂ ವಿರೋಧಿ ಭಾವನೆ ಬಂದಿದೆ ಎಂದು ಸತೀಶ್ ಜಾರಕಿಹೊಳಿ ಹಿಂದೂ ಪದದ ಹೇಳಿಕೆ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿ. ಗುಜರಾತ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಟ್ಟಿಸಿದ್ದ ದೇವಸ್ಥಾನ ಒಡೆದಾಗಲೂ ನೆಹರು ಬೆಂಬಲ ನೀಡಲಿಲ್ಲ. ಕಾಂಗ್ರೆಸ್ನವರಿಗೆ ಪ್ರತಿದಿನ ಹಿಂದೂಗಳನ್ನು ಬೈಯಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ. ಕಾಂಗ್ರೆಸ್ನವರು ತೋರಿಕೆಗಾಗಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಧಮ್ ಇದ್ರೆ ತಾಕತ್ ಇದ್ರೆ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ. ಸುರ್ಜೇವಾಲ ಅವರು ಮಾತನಾಡಿ ತಪ್ಪು ಅಂತ ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಿ. ನೋಟಿಸ್ ಕೊಡುವ ಧಮ್, ತಾಕತ್ ಇಲ್ಲ. ಸುಮ್ಮನೆ ಹೇಳಿಕೆ ಕೊಟ್ರೆ ಪ್ರಯೋಜನವಿಲ್ಲ.
ಭಾರತೀಯ ಪರಂಪರೆ ಹಿಂದೂ ಧರ್ಮದ ಜೀವನ ಪದ್ಧತಿ ಅಂತ ಸುಪ್ರೀಂಕೋರ್ಟ್ ಸಹ ವ್ಯಾಖ್ಯಾನ ಮಾಡಿದೆ. ಮಲಯಾಳಂ, ತೆಲುಗು ಅಂತ ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಪದ ಬೇರೆ, ಬೇರೆ ಅರ್ಥ ಬರಬಹುದು ಅದಲ್ಲ ಮುಖ್ಯ.
ಭಾರತೀಯ ಭಾಷೆಯಲ್ಲಿ ಹಿಂದೂ ಪದಕ್ಕೆ ಪವಿತ್ರವಾದ ಸ್ಥಾನಮಾನವಿದೆ. ಹಿಂದೂ ಧರ್ಮಕ್ಕಾಗಿ ಪ್ರಾಣ ಕೊಡಲು ಕೋಟ್ಯಂತರ ಜನ ಈ ನಾಡಿನಲ್ಲಿ ಬದುಕಿದ್ದಾರೆ. ಇನ್ಮುಂದೆ ಇಂತಹ ಕಿಡಿಗೇಡಿ ಹೇಳಿಕೆ ಕೊಡುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ