ಕಲಬುರಗಿ : ಸೇಡಂ ಪಟ್ಟಣದಲ್ಲಿರುವ ಶ್ರೀ ಸಿಮೆಂಟ್ ಫ್ಯಾಕ್ಟರಿ ಯಲ್ಲಿ ಇಂದು ಮತ್ತೊರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಳೆದ ಎರಡೂ ತಿಂಗಳಲ್ಲಿ ನಾಲ್ಕು ಸಾವುಗಳಾಗಿದ್ದು, ಆ ಪೈಕಿ ಇಬ್ಬರು ಸೇಡಂನವರೇ ಆಗಿದ್ದಾರೆ.
ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದ ಪರಿಣಾಮ ಜಾರ್ಖಂಡ್ ಮೂಲದ ಯುವಕ ರಾಜಕುಮಾರ(26) ಬಲಿಯಾಗಿದ್ದಾನೆ. ಇನ್ನು ಇದೇ ಫ್ಯಾಕ್ಟರಿಯಲ್ಲಿ ಕೆಲ ದಿನಗಳ ಹಿಂದಷ್ಟೆ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಮೃತಪಟ್ಟಿದ್ದ. ಈಗ ಮತ್ತೋರ್ವನ ಬಲಿಯಾಗಿದ್ದಾನೆ.
ಕಳೆದ ಎರಡೂ ತಿಂಗಳಲ್ಲಿ ನಾಲ್ಕು ಸಾವುಗಳಾಗಿದ್ದು, ಆ ಪೈಕಿ ಇಬ್ಬರು ಸೇಡಂನವರೇ ಆಗಿದ್ದಾರೆ. ಹೀಗಿದ್ದರೂ ಸಚಿವರು ಕಾರ್ಖಾನೆಗೂ ಭೇಟಿ ನೀಡಿಲ್ಲ. ಇತ್ತ ಅಧಿಕಾರಿಗಳು ಕೂಡ ಪ್ರಕರಣ ಕುರಿತು ಬೇಜವಾಬ್ದಾರಿ ಮತ್ತು ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.