ಉತ್ತರಕನ್ನಡ : ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಬೆಂಗಳೂರು ಮಹಾನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ ಈ ಒಂದು ಮಹಾಮಳೆಗೆ ಈಗಾಗಲೇ ಹಲವರು ಸಾವನ್ನಪ್ಪಿದ್ದು ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ವೃದ್ಧರೊಬ್ಬರು ಸಾವನಪ್ಪಿದ್ದಾರೆ.
ಹೌದು ಭಾರಿ ಗಾಳಿಗೆ ತಲೆಯ ಮೇಲೆ ಮರದ ಕೊಂಬೆ ಬಿದ್ದು, ಮಾಲ್ದಾರೆ ನಿವಾಸಿ ವಿಷ್ಣು ಬೆಳ್ಯಪ್ಪ (65) ಮೃತಪಟ್ಟಿದ್ದಾರೆ. ಬೆಳಿಗ್ಗೆ ಮನೆಯ ಮುಂಭಾಗದಲ್ಲಿ ಕುಳಿತಿದ್ದರು. ಈ ವೇಳೆ ಮರದ ಕೊಂಬೆ ವಿಷ್ಣು ಅವರ ಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಚಿಕಿತ್ಸೆಗೆ ಸಿದ್ದಾಪುರ ಸಮುದಾಯ ಆರೋಗ್ಯಕ್ಕೆ ಕರೆದೋಯ್ದರು ಮೃತಪಟ್ಟರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.