ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಹಾವೇರಿಯ ಕೂಲಿ ಕಾರ್ಮಿಕನೊಬ್ಬ ಚಿಕ್ಕಮಗಳೂರಿನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾನೆ.
ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಾಗೇಶ್ ಗೌಡ ಎಂಬುವರ ತೋಟದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ತಿರುವಳ್ಳಿ ಮೂಲದ ಯಲ್ಲಪ್ಪ(45) ಎಂಬಾತ ಕೆಲಸ ಮಾಡುತ್ತಿದ್ದನು. ನಾಗೇಶ್ ಗೌಡರ ತೋಟದ ಮೂಲಕ ಶ್ರೀಧರ್ ಗೌಡ ಅವರ ತೋಟದ ಲೈನ್ ಮನೆಗೆ ಹೋಗುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿ ಮಾಡಿ, ಸಾಯಿಸಿದೆ.
ಕೂಲಿ ಕೆಲಸ, ಗಾರೆ ಕೆಲಸವನ್ನು ಮೃತ ಯಲ್ಲಪ್ಪ ಮಾಡುತ್ತಿದ್ದರು. ಇಂದು ಅವರು ತೋಟದ ಮನೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿ ಮಾಡಿ ಸಾಯಿಸಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕೂಲಿ ಕಾರ್ಮಿಕ ಯಲ್ಲಪ್ಪ ಪಾರ್ಥೀವ ಶರೀರವನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಭಾರತ- ಅಮೆರಿಕ ವಾಣಿಜ್ಯ ಒಪ್ಪಂದ ರೈತರಿಗೆ ನೀಡಿರುವ ಮರಣ ಶಾಸನವೇ ಸರಿ: ಎಎಪಿ ಮುಖ್ಯಮಂತ್ರಿ ಚಂದ್ರು








