ಮೈಸೂರು : ಮೈಸೂರಿನಲ್ಲಿ ಕಾಡನೆ ದಾಳಿಗೆ ಇದೀಗ ಮತ್ತೊಂದು ಬಲಿಯಾಗಿದೆ. ಮಟಕೆರೆಯ ಎಸ್ ಟಿ ಕಾಲೋನಿಯಯಲ್ಲಿ ಕಾಡಾನೆ ದಾಳಿ ಮಾಡಿದ್ದು, ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮಟಕೇರಿ ಎಂಬಲ್ಲಿ ಈ ಒಂದು ಘಟನೆ ನಡೆದಿದೆ.
ಕಾಡನೇ ದಾಳಿಗೆ 62 ವರ್ಷದ ಮಾದ ಎಂಬ ವೃದ್ಧರು ಬಲಿಯಾಗಿದ್ದಾರೆ. ಬಹಿರ್ದೆಸೆಗೆ ಎಂದು ತೆರಳಿದ್ದ ವೇಳೆ ಮಾದ ಅವರ ಮೇಲೆ ಕಾಡಾನೆ ದಾಳಿ ಮಾಡಿದೆ. ಮಾದ ಚಿರಾಡುತ್ತಿದ್ದನ್ನು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಕೂಡಲೇ ಗ್ರಾಮಸ್ಥರು ಕಾಡಾನೆಯನ್ನು ಹೆಮ್ಮೆಟ್ಟಿಸಿದ್ದಾರೆ. ಆದರೆ 62 ವರ್ಷದ ಮಾದ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.








