ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಕಾಡಾನೆ ಉಪಟಳ ನಿಂತಿಲ್ಲ ಇದೀಗ ಕಾಡಾನೆದೊಳಗೆ ಮತ್ತೊಂದು ಬಲಿಯಾಗಿದೆ. ಹೌದು, ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ (34) ಇದ್ದಾರೆ. ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ನಾಗೇಶ ಗೌಡಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಏಳು ದಿನದ ಹಿಂದೆಯೂ ನಾಗೇಶಗೌಡ ತೋಟದಲ್ಲಿಯೇ ಕಾಡಾನೆ ದಾಳಿ ಮಾಡಿತ್ತು. ಕಾಡಾನೆ ದಾಳಿಗೆ ಬಲಿಯಾಗಿದ್ದ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ. ಒಂದೆಡೆ ಕಾಡಾನೆ ಸೆರಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದು ಕಡೆ, ಕಾರ್ಮಿಕ ಮಹಿಳೆಯನ್ನು ಬಳಿ ಪಡೆದಿದೆ.
ಕಾಡಾನೆ ಸರಿಗೆ ಏಳು ಕುಮ್ಕಿ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ದಾಳಿ ಮಾಡಿ ಮಹಿಳೆಯನ್ನು ಬಳಿ ಪಡೆದ ಕಾಡಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








