ಬೆಂಗಳೂರು: ಪಿ ಎಸ್ ಐ ನೇಮಕಾತಿಗಾಗಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರು 15 ಲಕ್ಷ ಲಂಚ ಪಡೆದ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್ ಮಾಡಿದ ಆರೋಪಕ್ಕೆ ಇದೀಗ ಪರಸಪ್ಪ ಉಲ್ಟಾ ಹೊಡೆದಿದ್ದಾನೆ
ವಿಧಾನಸಭೆಯಲ್ಲಿ ಜೋರಾದ ʻ ಮಡಿಕೇರಿ ಮೊಟ್ಟೆʼ ಗಲಾಟೆ : ಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ : ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಸಪ್ಪ, ಶಾಸಕ ದಡೇಸೂಗೂರು ನಮ್ಮ ಕುಲಬಾಂಧವರು.
ಶಾಸಕರ ಸಂಬಂಧಿ ಜೊತೆಗೆ ಜಮೀನು ವ್ಯವಹಾರವಿತ್ತು. ವ್ಯವಹಾರದ ಬಗ್ಗೆ ಮಾತನಾಡಲು ಶಾಸಕರ ಬಳಿ ಹೋಗಿದ್ವಿ. ದುಡ್ಡು ಸಂದಾಯದ ಬಗ್ಗೆ ಶಾಸಕರ ಬಳಿ ಮಾತನಾಡಿದ್ವಿ. ಈಗ ಆಡೀಯೋ, ವಿಡಿಯೋವನ್ನು ತಿರುಚಿ ಶಾಸಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.
ವಿಧಾನಸಭೆಯಲ್ಲಿ ಜೋರಾದ ʻ ಮಡಿಕೇರಿ ಮೊಟ್ಟೆʼ ಗಲಾಟೆ : ಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ : ಸಿದ್ದರಾಮಯ್ಯ ಆಕ್ರೋಶ
ಅಂದು ಪೇರಳೆ ಹಣ್ಣು ಇದ್ದ ಬ್ಯಾಗ್ ಕೊಟ್ಟು ಫೋಟೋ ತೆಗೆಸಿಕೊಂಡ್ವಿ. ಈಗ ಆ ಫೋಟೋವನ್ನು ತಿರುಚಿ ಲಂಚ ಕೊಟ್ಟಿದ್ದು ಎಂದು ಆರೋಪ ಮಾಡಿ ನಮ್ಮ ತೇಜೋವಧೆ ಮಾಡಲಾಗುತ್ತಿದೆ.
ವಿಧಾನಸಭೆಯಲ್ಲಿ ಜೋರಾದ ʻ ಮಡಿಕೇರಿ ಮೊಟ್ಟೆʼ ಗಲಾಟೆ : ಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ : ಸಿದ್ದರಾಮಯ್ಯ ಆಕ್ರೋಶ
ಮಾನನಷ್ಟವಾದರೆ ಕಮಿಷ್ನರ್ ಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಮಗನ ಪಿ ಎಸ್ ಐ ಹುದ್ದೆಗಾಗಿ ಶಾಸಕರಿಗೆ ಲಂಚ ಕೊಟ್ಟಿದ್ದೇನೆ ಎಂದು ಹೇಳಿದ್ದ ಪರಸಪ್ಪ ಈಗ ಶಾಸಕರ ಪರ ಬ್ಯಾಟ್ ಬೀಸಿದ್ದು, ತಾನು ಲಂಚ ಕೊಟ್ಟಿಲ್ಲ. ನನ್ನ ಮಗ ಫಿಸಿಕಲ್ ಪಾಸ್ ಆಗಿಲ್ಲ ಎಂದು ತಿರುಗಿ ಬಿದ್ದಿದ್ದಾರೆ.
ವಿಧಾನಸಭೆಯಲ್ಲಿ ಜೋರಾದ ʻ ಮಡಿಕೇರಿ ಮೊಟ್ಟೆʼ ಗಲಾಟೆ : ಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ : ಸಿದ್ದರಾಮಯ್ಯ ಆಕ್ರೋಶ