ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಹೆಚ್ಚಾಗುತ್ತಿದೆ. ಟ್ಯಾಂಕ್ ನೀರಿಗೆ ಚಿನ್ನದ ಬೆಲೆ ಬಂದಿದ್ದು, ಇದಕ್ಕೂ ಕಡಿವಾಣ ಹಾಕಲಾಗಿದೆ. ಇದರ ನಡುವೆ ಕುಡಿಯೋ ನೀರಿನಲ್ಲಿ ಬೆಂಗಳೂರಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಒಂದು ಪತ್ತೆಯಾಗಿರೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾಲರಾ ಜೊತೆಗೆ ನೀರಿನ ಬರದ ಜೊತೆಗೆ, ಈಗ ಬ್ಯಾಕ್ಟೀರಿಯಾವೊಂದು ಪತ್ತೆಯಾಗಿರೋದು ತಿಳಿದು ಬಂದಿದೆ.
ಆರೋಗ್ಯ ಇಲಾಖೆಯಿಂದ ಕುಲುಷಿತ ನೀರಿನಿಂದ ಕಾಲರಾ ಹರಡುತ್ತಿರುವುದನ್ನ ತಡೆಗಟ್ಟೋ ನಿಟ್ಟಿನಲ್ಲಿ ನೀರಿನ ಪರೀಕ್ಷೆಗೆ ಇಳಿಯಲಾಗಿತ್ತು. ಬೆಂಗಳೂರು ನಗರ, ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯ 570ಕ್ಕೂ ಹೆಚ್ಚು ಕಡೆಗಳಲ್ಲಿ ನೀರಿನ ಸ್ಯಾಂಪಲ್ ಪಡೆದು, ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
270 ನೀರಿನ ಮಾದರಿಯ ವರದಿ ರಿಪೋರ್ಟ್ ಬಂದಿದ್ದು, ಈ ಪೈಕಿ ಬೆಂಗಳೂರಿನ 20 ಕಡೆಗಳಲ್ಲಿ ಸಂಗ್ರಹಿಸಲಾಗಿರುವಂತ ನೀರಿನಲ್ಲಿ ಇ.ಕೋಲಿ ಎಂಬ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಲ್ಲದೇ 70 ಕಡೆಯ ನೀರು ಕುಡಿಯೋದಕ್ಕೆ ಯೋಗ್ಯವಿಲ್ಲ ಅನ್ನೋದು ಕೂಡ ರಿಪೋರ್ಟ್ ನಿಂದ ತಿಳಿದು ಬಂದಿದೆ.
ಅಂದಹಾಗೇ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಟೆಸ್ಟಿಂಗ್ ಮಾಡಿದ್ದು, ಕೆಲವೆಡೆ ಏರಿಯಾದ ನೀರಿನಲ್ಲಿ ಟಾಯ್ಲೆಟ್ ನೀರು, ಕಲುಷಿತ ನೀರು ಮಿಕ್ಸ್ ಆಗಿರೋದು ರಿಪೋರ್ಟ್ನಲ್ಲಿ ರಿವೀಲ್ ಆಗಿದೆ. ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು.