ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರು ಜನತೆಗೆ ಬಿಗ್ ಶಾಕ್ ಎನ್ನುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಬಳಕೆದಾರರು, ಸೇವಾ ಶುಲ್ಕವನ್ನು 2025-26ನೇ ಆರ್ಥಿಕ ಸಾಲಿನಿಂದ ಆಸ್ತಿ ತೆರಿಗೆ ಜೊತೆಯಲ್ಲಿ ಸಂಗ್ರಹಿಸಲು ಬಿಬಿಎಂಪಿ ಆದೇಶಿಸಿದೆ.
ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಘನ ಸರ್ಕಾರವು ಗೃಹ, ವಾಣಿಜ್ಯ, ಸಾಂಖ್ಯಿಕ ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ (ಸೇವಾ ಶುಲ್ಕ)ವನ್ನು ಸಂಗ್ರಹಿಸಲು ಉಲ್ಲೇಖ (01) ರನ್ವಯ ಅನುಮೋದನೆಯನ್ನು ನೀಡಿದ್ದು ಅನುಷ್ಠಾನದಲ್ಲಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳಿಗೆ ಅನುಮೋದನೆಯನ್ನು ನೀಡಿರುತ್ತದೆ ಎಂದಿದ್ದಾರೆ.
ಅದರಂತೆ ಗ್ರಹ, ವಾಣಿಜ್ಯ ಮತ್ತು ಸಾಂಖ್ಯಿಕ ತ್ಯಾಜ್ಯ ಉತ್ಪಾದಕರಿಂದ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ (ಸೇವಾ ಶುಲ್ಕ)ವನ್ನು ದಿನಾಂಕ: 01.04.2025 ರಿಂದ ಅನ್ವಯವಾಗುವಂತೆ ಸಂಗ್ರಹಿಸಲು ಮತ್ತು ಉಲ್ಲೇಖ (01) ರಲ್ಲಿರುವಂತೆ ಶುಲ್ಕದ ವಾರ್ಷಿಕ ವೃದ್ಧಿಯನ್ನು 2026-27ನೇ ಸಾಲಿನಿಂದ ಅನುಷ್ಠಾನಗೊಳಿಸಲು ಉಲ್ಲೇಖ (5) ರಂತೆ ಮಾನ್ಯ ಆಡಳಿತಗಾರರು ಅನುಮೋದನ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
GOOD NEWS: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿ ‘ವಾಟರ್ ಆಪರೇಟರ್’ಗಳಿಗೆ ಗುಡ್ ನ್ಯೂಸ್
BIG NEWS : ‘ಗೃಹಲಕ್ಷ್ಮಿ’ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ