ಬೆಂಗಳೂರು : ಬೆಂಗಳೂರಿನ ಜನತೆಗೆ ಜಿಬಿಎ ಮತ್ತೊಂದು ಶಾಕ್ ನೀಡಿದ್ದು, ಇನ್ಮುಂದೆ ರೋಡ್ ಸೈಡ್ ಪಾರ್ಕ್ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವ ಹೊಸ ನಿಯಮವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಶೀಘ್ರದಲ್ಲಿ ಜಾರಿಗೊಳಿಸಲಿದೆ.
ಹೌದು ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರದಲ್ಲೇ ಸ್ಟ್ರೀಟ್ ಪಾರ್ಕಿಂಗ್ ನಿಯಮ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದಕ್ಕೂ ಕಾಸು ಕೊಡಬೇಕಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಸ್ಟ್ರೀಟ್ನಲ್ಲಿ ಪೇ & ಪಾರ್ಕಿಂಗ್ ರೂಲ್ಸ್ ಜಾರಿಗೆ ತರಲು ಜಿಬಿಎ ಸಿದ್ಧತೆ ನಡೆಸಿದೆ.
ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು?
ಸ್ಟ್ರೀಟ್ ಪಾರ್ಕಿಂಗ್ ಗೆ 1 ಗಂಟೆಗೆ ಫೋರ್ ವ್ಹೀಲರ್ಗೆ 30 ರೂ. ಒಂದು ದಿನಕ್ಕೆ 150 ರೂ. ಹಾಗು ತಿಂಗಳ ಪಾಸ್ ವ್ಯವಸ್ಥೆಗೆ 3,000 ರೂ.ನಿಗದಿ ಪಡಿಸಲಾಗಿದೆ. ಇನ್ನು ದ್ವಿಚಕ್ರ ವಾಹನಕ್ಕೆ 1 ಗಂಟೆಗೆ 15 ರೂ. ಒಂದು ದಿನಕ್ಕೆ 75 ರೂ ಹಾಗು ತಿಂಗಳಿಗೆ 1,500 ರೂ ನಿಗದಿಪಡಿಸಲಾಗಿದೆ. ಸದ್ಯ 35 ರಸ್ತೆಯಲ್ಲಿ ಪೇ & ಪಾರ್ಕ್ ಪ್ಲ್ಯಾನ್ ರೂಪಿತವಾಗಿದ್ದು, 16 ಕೋಟಿ ಆದಾಯದ ನಿರೀಕ್ಷೆಯಲ್ಲಿ ಜಿಬಿಎ ಇದೆ.








