ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಹಗರಣ ಬಯಲಿಗೆ ಬಂದಿದೆ. “ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 14 ಮತ್ತು 15ನೇ ಹಣಕಾಸು ಆಯೋಗದ ₹ 2,067 ಕೋಟಿ ಅನುದಾನವನ್ನು ಹೇಳ ಹೆಸರಿಲ್ಲದಂತೆ ತಿಂದು ಬಿಬಿಎಂಪಿಯ ಅಧಿಕಾರಿಗಳ ತೇರಿದ್ದಾರೆ. ಈ ಮೂಲಕ ಬಿಬಿಎಂಪಿಯಲ್ಲಿ ಬೃಹತ್ ಹಗರಣ ನಡೆದಿದೆ ಎಂಬುದಾಗಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರು, ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕರಾದಂತ ಎನ್ ಆರ್ ರಮೇಶ್ ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 2017-18 ರಿಂದ 2023-24 ರವರೆಗಿನ ಅವಧಿಯಲ್ಲಿ 14 ಮತ್ತು 15ನೇ ಹಣಕಾಸು ಆಯೋಗದ ಒಟ್ಟು ₹ 2,09,690,29,00,000/- (ಎರಡು ಲಕ್ಷ ಒಂಬತ್ತು ಸಾವಿರ ಆರು ನೂರಾ ತೊಂಬತ್ತು ಕೋಟಿ ಇಪ್ಪತ್ತೊಂಬತ್ತು ಲಕ್ಷ) ಗಳನ್ನು ಬಿಡುಗಡೆ ಮಾಡಿರುತ್ತದೆ. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಾರ್ಯದ ಸಮಸ್ಯೆಗಳ ಪರಿಹಾರ ಕಾರ್ಯಗಳಿಗೆಂದು 2013-14 ರಿಂದ 2023-24 ರ ಅವಧಿಯಲ್ಲಿ 13, 14 ಮತ್ತು 15ನೇ ಹಣಕಾಸು ಆಯೋಗದ ಒಟ್ಟು ₹ 2066,94,89,000/- (ಎರಡು ಸಾವಿರದ ಅರವತ್ತಾರು ಕೋಟಿ ತೊಂಬತ್ತನಾಲ್ಕು ಲಕ್ಷದ ಎಂಬತ್ತೊಂಬತ್ತು ಸಾವಿರ) ಗಳಷ್ಟು ಬೃಹತ್ ಮೊತ್ತ ಬಿಡುಗಡೆ ಆಗಿರುತ್ತದೆ ಎಂದಿದ್ದಾರೆ.
Mechanical Sweeping Machines ಮತ್ತು Compactor ಗಳ ಖರೀದಿ, ವೈಜ್ಞಾನಿಕ ಸಂಸ್ಕರಣಾ ಘಟಕಗಳ ನಿರ್ಮಾಣ, KCDC ಘಟಕದ ಉನ್ನತೀಕರಣ, ಭೂಭರ್ತಿ ಕೇಂದ್ರಗಳ ಅಭಿವೃದ್ಧಿ, ಸಂಸ್ಕರಣಾ ಘಟಕಗಳು ಮತ್ತು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ / ಪ್ರದೇಶಗಳ ಅಭಿವೃದ್ಧಿ, ಆ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಿಕೆ ಹಾಗೂ ಸುಧಾರಿತ ಉಪಕರಣಗಳ (Advanced Equipments) ಖರೀದಿ ಸೇರಿದಂತೆ ಹತ್ತು ಹಲವು ಹೆಸರುಗಳಲ್ಲಿ ಒಟ್ಟು ₹ 2,067 ಕೋಟಿ ರೂಪಾಯಿಗಳಷ್ಟು ಕೇಂದ್ರ ಸರ್ಕಾರದ 13, 14 ಮತ್ತು 15ನೇ ಹಣಕಾಸು ಆಯೋಗದ ಅನುದಾನವನ್ನು ವೆಚ್ಛ ಮಾಡಲಾಗಿದೆ ಎಂಬ ನಂಬಲಸಾಧ್ಯವಾದ ದಾಖಲೆಗಳನ್ನು ತೋರಿಸುತ್ತಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
- A) ಈ ಅನುದಾನಗಳ ಮೂಲಕ 2016-17 ರಲ್ಲಿ ಪಾಲಿಕೆ ಕ್ರಯಕ್ಕೆ ಪಡೆದಿದ್ದ 60 ಕ್ಕೂ ಹೆಚ್ಚು Mechanical Sweeper ಗಳು ಮತ್ತು Compactor ಗಳ ಪೈಕಿ ಈಗ ಕೇವಲ ಮೂರ್ನಾಲ್ಕು ವಾಹನಗಳು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದು, ಇನ್ನುಳಿದ ವಾಹನಗಳು ಎಲ್ಲಿವೆಯೋ / ಏನಾದವೋ ಎಂಬ ವಿಷಯ ಯಾರಿಗೂ ತಿಳಿದಿಲ್ಲ. ತಲಾ 47 ಲಕ್ಷ ರೂಪಾಯಿ ಬೆಲೆ ಬಾಳುವ Mechanical Sweeper ಗಳಿಗೆ ತಲಾ 3 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ನಮೂದಿಸುವ ಮೂಲಕ ಹತ್ತಾರು ಕೋಟಿ ರೂಪಾಯಿಗಳನ್ನು ನೋಡ ನೋಡುತ್ತಿದ್ದಂತೆಯೇ ಲೂಟಿ ಹೊಡೆಯಲಾಗಿತ್ತು !!!
- B) ಸುಮಾರು 430 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಅನುದಾನವನ್ನು ವೆಚ್ಛ ಮಾಡಿ 2016 ರಲ್ಲಿ ಸುಬ್ಬರಾಯನ ಪಾಳ್ಯ, ಚಿಕ್ಕನಾಗಮಂಗಲ, ಸೀಗೇಹಳ್ಳಿ, ಕನ್ನಳ್ಳಿ, ಲಿಂಗಧೀರನಹಳ್ಳಿ ಮತ್ತು ದೊಡ್ಡ ಬಿದರಕಲ್ಲು ಗ್ರಾಮಗಳಲ್ಲಿ ನಿರ್ಮಿಸಿದ್ದ “ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ”ಗಳ ಪೈಕಿ ಮೂರು ಘಟಕಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಒಂದು ಘಟಕ ಕುಂಟುತ್ತಾ ಸಾಗಿದ್ದರೆ ಚಿಕ್ಕನಾಗಮಂಗಲ ಮತ್ತು ದೊಡ್ಡ ಬಿದರಕಲ್ಲು ಘಟಕಗಳು ಮಾತ್ರ ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ !!!
- C) ಬಾಗಲೂರು, ಮಿಟ್ಟಗಾನ ಹಳ್ಳಿ ಮತ್ತು ಬೈಯಪ್ಪನ ಹಳ್ಳಿಯಲ್ಲಿರುವ ಭೂಭರ್ತಿ ಕೇಂದ್ರಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಈ ಭೂಭರ್ತಿ ಕೇಂದ್ರಗಳ ಅಭಿವೃದ್ಧಿ ಕಾರ್ಯಗಳಿಗೆಂದು ಮತ್ತು ತ್ಯಾಜ್ಯ ದ್ರಾವಣ ಭೂಮಿಯ ಒಡಲನ್ನು ಸೇರದಂತೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲೆಂದು ಪ್ರತಿಯೊಂದು ಭೂಭರ್ತಿ ಕೇಂದ್ರಕ್ಕೆ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಶೇ. 90% ರಷ್ಟು ಅನುದಾನವನ್ನು ಲೂಟಿ ಮಾಡಲಾಗಿದೆ.
ಉದಾಹರಣೆಗೆ ಬಾಗಲೂರು ಮತ್ತು ಮಿಟ್ಟಗಾನ ಹಳ್ಳಿ ಭೂಭರ್ತಿ ಕೇಂದ್ರಗಳಲ್ಲಿ ತಳ ಮಟ್ಟದಿಂದ ಮೇಲ್ಭಾಗದವರೆಗೆ Synthetic Liner ಗಳ ಅಳವಡಿಕೆ ಕಾರ್ಯಕ್ಕೆಂದು ಪ್ರಭಾವೀ ಸಚಿವ ಕೆ. ಜೆ. ಜಾರ್ಜ್ ಅವರ ಅತ್ಯಾಪ್ತ ವಂದಿತ್ ರೆಡ್ಡಿ ಎಂಬ ಮಹಾ ವಂಚಕನಿಗೆ ಬರೋಬ್ಬರಿ 110 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ Synthetic Liner ಗಳ ಬದಲಾಗಿ JC ರಸ್ತೆಯ ಅಂಗಡಿಗಳಲ್ಲಿ ಮಾರಾಟ ಮಾಡುವ Plastic Sheet ಗಳನ್ನು ಅಳವಡಿಸುವ ಮೂಲಕ ಶೇ. 90% ರಷ್ಟು ಹಣವನ್ನು ಈ ಕಾರ್ಯದಲ್ಲಿ ಲೂಟಿ ಮಾಡಲಾಗಿದೆ.
- D) KCDC ಘಟಕದ ಉನ್ನತೀಕರಣ ಕಾರ್ಯದ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
- E) 07 ಸಂಸ್ಕರಣಾ ಘಟಕಗಳು ಮತ್ತು 03 ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ / ಪ್ರದೇಶಗಳ ಅಭಿವೃದ್ಧಿ ಕಾರ್ಯಗಳ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
- F) ಸುಧಾರಿತ ಉಪಕರಣಗಳ ಖರೀದಿಯ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
ತಾವೇ ನಿರ್ಧರಿಸಿದ ಬೆರಳೆಣಿಕೆಯಷ್ಟು ಗುತ್ತಿಗೆದಾರರ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆಯ ಭ್ರಷ್ಟ ಅಧಿಕಾರಿಗಳು ₹ 2,067 ಕೋಟಿ ಮೊತ್ತದ ಅನುದಾನದ ಪೈಕಿ ಶೇ. 90% ರಷ್ಟು ಅನುದಾನವನ್ನು ಲೂಟಿ ಮಾಡಿರುವುದಕ್ಕೆ ಸ್ಪಷ್ಟ ಸಾಕ್ಷಾಧಾರಗಳು ನಮ್ಮ ಕಣ್ಣಿಗೇ ಗೋಚರಿಸುತ್ತವೆ.
ಬಿಡುಗಡೆಯಾಗಿರುವ ಒಟ್ಟು ಅನುದಾನಗಳ ಮೂಲಕ ಕೈಗೊಳ್ಳಲಾಗಿರುವ ಕಾರ್ಯಗಳ ಪೈಕಿ ಶೇ. 10% ರಷ್ಟು ಕಾರ್ಯಗಳನ್ನೂ ಮಾಡಿರುವ ಸಾಕ್ಷಾಧಾರಗಳನ್ನು ತೋರಿಸಲು ಈ ಅಧಿಕಾರಿಗಳಿಗೆ ಸಾಧ್ಯವಾಗುವುದೇ ಇಲ್ಲ !!!
ಬೆಂಗಳೂರು ಮಹಾನಗರದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ “ತ್ಯಾಜ್ಯ ವಿಲೇವಾರಿ ಸಮಸ್ಯೆ” ಯನ್ನು ಪರಿಹರಿಸುವ ನಿಟ್ಟಿನಲ್ಲಿ ಅತ್ಯಂತ ಸಮರ್ಪಕವಾಗಿ, ಪಾರದರ್ಶಕವಾಗಿ ಸದ್ಬಳಕೆಯಾಗಬೇಕಿದ್ದ ₹ 2,067 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಶೇ. 90% ರಷ್ಟು ಅನುದಾನವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು / ಮುಖ್ಯ ಆಯುಕ್ತರುಗಳಾಗಿದ್ದ ಲಕ್ಷ್ಮೀನಾರಾಯಣ್, IAS (Retd), ಜಿ. ಕುಮಾರ್ ನಾಯಕ್, IAS (Retd) (ಮಾನ್ಯ ಸಂಸದರು, ರಾಯಚೂರು ಲೋಕಸಭಾ ಕ್ಷೇತ್ರ), ಮಂಜುನಾಥ್ ಪ್ರಸಾದ್, IAS, ಬಿ. ಹೆಚ್. ಅನಿಲ್ ಕುಮಾರ್, IAS (Retd), ಗೌರವ್ಗುಂಪ್ತ, IAS ಮತ್ತು ತುಷಾರ್ ಗಿರಿನಾಥ್, IAS ಹಾಗೂ ಇದೇ ಅವಧಿಯಲ್ಲಿ ಪಾಲಿಕೆಯ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿಜಯ ಭಾಸ್ಕರ್, IAS (Retd), ರಾಕೇಶ್ ಸಿಂಗ್, IAS (Retd) ಮತ್ತು ಉಮಾಶಂಕರ್, IAS ಹಾಗೂ 2013-14 ರಿಂದ 2024-25 ರ ಅವಧಿಯಲ್ಲಿ ಪಾಲಿಕೆಯ “ಘನತ್ಯಾಜ್ಯ ನಿರ್ವಹಣೆ ಇಲಾಖೆ”ಯ ವಿಶೇಷ ಆಯುಕ್ತರುಗಳಾಗಿ, ಜಂಟಿ ಆಯುಕ್ತರುಗಳಾಗಿ ಮತ್ತು ಮುಖ್ಯ ಅಭಿಯಂತರರುಗಳಾಗಿ ಕಾರ್ಯ ನಿರ್ವಹಿಸಿರುವ ಎಲ್ಲಾ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ವಿರುದ್ಧ, ಈ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, 2023 ರ ಅನ್ವಯ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರಿ ಅನುದಾನ ದುರ್ಬಳಕೆ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅನ್ವಯ ಪ್ರಕರಣಗಳನ್ನು ED (ಜಾರಿ ನಿರ್ದೇಶನಾಲಯ) ಯಲ್ಲಿ ಈ ಹಗರಣಕ್ಕೆ ಸಂಬಂಧಿಸಿದ 1,295 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ದಾಖಲಿಸಿದ್ದಾರೆ.
BREAKING: ರಾಜ್ಯದ ಅತಿಡೊಡ್ಡ 63 ಅಡಿ ಎತ್ತರದ ‘ಶ್ರೀರಾಮಾಂಜನೇಯ ಮೂರ್ತಿ’ ಉದ್ಘಾಟನೆ