ಬೆಂಗಳೂರು : ಈಗಾಗಲೇ ಹೈಕಮಾಂಡ್ ಅಂಗಳಕ್ಕೆ ನಿಗಮ ಮಂಡಳಿ ಚೆಂಡು ತಲುಪಿದ್ದು, ಆದರೂ ಪಟ್ಟಿ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ನಿಗಮ ಮಂಡಳಿ ನೇಮಕ ವಿಚಾರ ಕುರಿತಂತೆ ಕಾಂಗ್ರೆಸ್ ನಲ್ಲಿ ಇನ್ನೂ ಗೊಂದಲ ಬಗೆ ಹರಿಯುವಂತೆ ಕಾಣುತ್ತಿಲ್ಲ.
ಏಕೆಂದರೆ ಸಿಎಂ ಹಾಗೂ ಡಿಸಿಎಂ ನಡುವೆ ಈ ಕುರಿತಂತೆ ಜಟಾಪಟಿ ನಡೆಯುತ್ತಿದ್ದು ಕೆ ಸಿ ವೇಣುಗೋಪಾಲ್ ಪಟ್ಟಿ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಸಿಎಂ ಡಿಸಿಎಂ ಬೇಸರ ವ್ಯಕ್ತಪಡಿಸಿದ್ದು, ಗೊಂದಲ ಬಗೆಹರಿಸಲು ಜನವರಿ 26ರಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಈ ಹಿನೆಲೆಯಲ್ಲಿ ಜನವರಿ 26ರಂದು AICC ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಂದು ಖರ್ಗೆ ಅವರ ಉಪಸ್ಥಿತಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ರಾಜಕೀಯ ನಾಯಕರು ಸಿಎಂ ಹಾಗೂ ಡಿಸಿ ಮಧ್ಯೆ ಚಿಟಾಪಟಿ ನಡೆಯುತ್ತಿದ್ದು ಹೈಕಮಾಂಡ್ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲು ಹಿಂದೇಟು ಹಾಕುತ್ತಿರುವ ಕೆ ಸಿ ವೇಣುಗೋಪಾಲ್ ನಡೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ರಾಜಕೀಯ ವಾಪಸ್ ಬಂದಿದ್ದು ಗೊಂದಲ ಬಗೆಹರಿಸಲು ಮತ್ತೆ ಆಗಮಿಸಲಿದ್ದಾರೆ ಜನವರಿ 26ರಂದು ನಿಗಮ ಮಂಡಳಿ ಸ್ಥಾನದಲ್ಲಿ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಂದೇ ರಾಜಕ್ಕೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.