ಬೆಂಗಳೂರು : ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಣ್ಣ ಪುಟ್ಟ ವಿಚಾರವಾಗಿ ಬೈಕ್ ಸವಾರ ರೌಡಿಸಂ ಆಡಿಸಿರುವ ಘಟನೆ ವರದಿಯಾಗಿದೆ. ಕೇವಲ ಒಂದೇ ಮಾತಿನಲ್ಲಿ ಮುಗಿಯಬೇಕಿದ್ದ ವಿಚಾರಕ್ಕೆ ಕಿರಿಕ್ ತೆಗೆದು ಕಾರು ನಿಲ್ಲಿಸಿ ಬೈಕ್ ಸವಾರ ಕಾರನ್ನು ಡ್ಯಾಮೇಜ್ ಮಾಡಿದ್ದಾನೆ.
ಬೆಂಗಳೂರಿನ ನೆಲಮಂಗಲದಿಂದ ಆದಿತ್ಯ ಎಂಬಾತ ಕೆಲಸಕ್ಕೆ ತೆರಳುತ್ತಿದ್ದ. ಮಾದಾವರ ಜಂಕ್ಷನ್ ಬಳಿ ಆದಿತ್ಯ ಮೇಲೆ ದರ್ಪ ತೋರಿದ್ದು, ಬೈಕ್ ಸವಾರ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಅಸಭ್ಯವಾಗಿ ಕೂಡ ವರ್ತನೆ ಮಾಡಿದ್ದಾನೆ, ಕಾರಿನ ಮಿರರ್ ಒಡೆದು ಅಶ್ಲೀಲ ವಾಗಿ ಬೈದು ನಿಂದನೆ ಮಾಡಿದ್ದಾನೆ. ಬೈಕ್ ಸವಾರ ಕಾರಿನ ಮಿರರ್ ಒಡೆಯುವುದು ಹಾಗೂ ಅಶ್ಲೀಲವಾಗಿ ಬೈಯುತ್ತಿರುವುದನ್ನು ಆದಿತ್ಯ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.








