ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ರೋಡರೇಜ್ ಪ್ರಕರಣಗಳು ಹೆಚ್ಚುತ್ತಿದ್ದು, ದಾರಿ ಬಿಡಲಿಲ್ಲ ಎಂದು ಬೈಕ್ ಸವಾರರೊಬ್ಬ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಡುರಸ್ತೆಯಲ್ಲಿಯೇ ಡ್ರ್ಯಾಗರ್ ಹಿಡಿದು ಬೈಕ್ ಸವಾರ ಪುಂಡಾಟ ಮೆರೆದಿದ್ದಾನೆ.
ಗೂಡ್ಸ್ ವಾಹನ ಚಾಲಕನ ಮೇಲೆ ಬೈಕ್ ಸವಾರ ದರ್ಪ ತೋರಿದ್ದಾನೆ. ಗಲಾಟೆ ವೇಳೆ ಗೂಡ್ಸ್ ವಾಹನದ ಗ್ಲಾಸ್ ಒಡೆದು ಪುಡಿ ರೌಡಿ ದಾಂದಲೆ ಮಾಡಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಕೆಳಗೆ ನಿನ್ನೆ ಸಂಜೆ ಒಂದು ಗಲಾಟೆ ನಡೆದಿದೆ.