ಬೆಂಗಳೂರು : ಇತ್ತೀಚಿಗೆ ಅನೈತಿಕ ಸಂಬಂಧದಿಂದ ಕೊಲೆಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನಲ್ಲಿ ಇದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಪ್ರೇಯಸಿಯ ಪತಿಯನ್ನೇ ಪ್ರಿಯಕರ ಒಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಸುನೀಲ್ ನಾಯಕ್ ಕೊಲೆಯಾದ ಪತಿ. ಪ್ರಿಯಕರ ಬಸುದೇವ್ ಮಲ್ಲಿಕ್ ಈ ಕೃತ್ಯ ಎಸಗಿದ್ದಾನೆ. ಆರೋಪಿ ಬಸುದೇವ್ ಮಲ್ಲಿಕ್ ಸುನೀಲ್ ನಾಯಕ್ ಪತ್ನಿಯೊಂದಿಗೆ ಸಲುಗೆ ಹೊಂದಿದ್ದ. ಈ ವಿಚಾರ ತಿಳಿದು ಸುನೀಲ್ ನಾಯಕ್ ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ಆರೋಪಿ ಬಸುದೇವ್ ನಾಯಕ್ ಮದ್ಯಪಾನ ಮಾಡುವ ನೆಪದಲ್ಲಿ ಒಟ್ಟಿಗೆ ಸೇರಿದ್ದಾರೆ.
ಈ ವೇಳೆ ಕಂಠಪೂರ್ತಿ ಕುಡಿಸಿ ಸುನೀಲ್ ನಾಯಕ್ನನ್ನ ಬಸುದೇವ್ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮೃತದೇಹವನ್ನು ಮೂಟೆಯಲ್ಲಿ ಹಾಕಿ ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಈ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಬಸುದೇವ್ ಮಲ್ಲಿಕ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.








