ಬೆಳಗಾವಿ : ಬೆಳಗಾವಿಯಲ್ಲಿ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಳ್ ಹೆಬ್ಬಾಳ್ಕರ್ ಕಾರು ಚಾಲಕ ಬಸವಂತಗೆ ಚಾಕು ಇರಿದಿದ್ದ ಪ್ರಕರಣ ನಡೆದಿತ್ತು. ಅದರ ಬೆನಲ್ಲೇ ಇದೀಗ ಮತ್ತೊಂದು ಚಾಕು ಇರಿತ ಪ್ರಕರಣ ವರದಿಯಾಗಿದೆ
ಜಾಮೀನಿನ ಮೇಲೆ ಹೊರಬಂದಿದ್ದವನಿಂದ ಚೂರಿ ಇರಿಯಲಾಗಿದೆ. ಕಣ್ಣೆತ್ತಿ ನೋಡಿದ್ದಕ್ಕೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ. ಬೆಳಗಾವಿಯ ನ್ಯೂ ಗಾಂಧಿನಗರದಲ್ಲಿ ಮಸೀದಿ ಮುಂದೆ ಈ ಒಂದು ಘಟನೆ ನಡೆದಿದ್ದು ಶುಕ್ರವಾರದ ನಮಾಜ್ ಮುಗಿಸಿ ಹೊರ ಬಂದಾಗ ಗಲಾಟೆ ಆಗಿದೆ.
ಈ ವೇಳೆ ಜುಶಾನ್ ಎಂಬ ಯುವಕನಿಗೆ ಮುಜಾಮಿಲ್ ಚಾಕು ಇರದಿದ್ದಾನೆ. ಮುಂಜಾಮ್ಮಿಲ್ ಸತ್ತಿಗೇರಿ ಎಂಬಾತ ತಿಂಗಳ ಹಿಂದೆಯೇ ಜಾಮೀನು ಮೇಲೆ ಹೊರಗಡೆ ಬಂದಿದ್ದ ಆರೋಪಿ ಮುಜಮಿಲ್ ಸತ್ತಿಗೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








