ಕೊಪ್ಪಳ : ದೇಶ ಎಷ್ಟೇ ಮುಂದುವರೆದರು ಸಹ ಇನ್ನು ನಮ್ಮ ಗ್ರಾಮೀಣ ಭಾಗದಲ್ಲಿ ಹಲವು ಮೂಢನಂಬಿಕೆ ಹಾಗೂ ಹಲವು ಅನಿಷ್ಟ ಪದ್ದತಿಗಳು ಇನ್ನೂ ಜಾರಿಯಲ್ಲಿವೆ. ಇದೀಗ ಕೊಪ್ಪಳದಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ನಡೆದಿದೆ.
ತುಮಕೂರಲ್ಲಿ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಗುಡಿಸಲುಗಳು : ಬೀದಿಗೆ ಬಂದು ನಿಂತ ಬಡ ಕುಟುಂಬಗಳು
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನುವ ವಿಷಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ ಎಂದು ಹೇಳಲಾಗುತ್ತಿದ್ದು ಶಂಕ್ರಪ್ಪ ಬೇನಳ್ಳಿ ಕುಟುಂಬಕ್ಕೆ ಇದೀಗ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
37 ಪರೀಕ್ಷೆಗಳಿಗೆ ಒಳಗಾಗಲಿರುವ ಬೆಂಗಳೂರಿನ ಮೊದಲ ಚಾಲಕರಹಿತ ‘ಮೆಟ್ರೋ ರೈಲು’
ಸಮಾಜದ ಯಾವುದೇ ಸಮಾರಂಭಗಳಿಗೆ ಶಂಕ್ರಪ್ಪ ಕುಟುಂಬಕ್ಕೆ ಆಹ್ವಾನ ಇಲ್ಲ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಇದೀಗ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದುವರೆ ವರ್ಷದಿಂದ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುತ್ತಿದೆ.
37 ಪರೀಕ್ಷೆಗಳಿಗೆ ಒಳಗಾಗಲಿರುವ ಬೆಂಗಳೂರಿನ ಮೊದಲ ಚಾಲಕರಹಿತ ‘ಮೆಟ್ರೋ ರೈಲು’
ಕಾರ್ಪೆಂಟರ್ ಆಗಿ ಶಂಕ್ರಪ್ಪ ಕೆಲಸ ಮಾಡಿಕೊಂಡಿದ್ದಾರೆ. ಹಾಗಾಗಿ ರೂ. 1, ಹಣ ದಂಡ ಕೊಡುವುದಕ್ಕೆ ಆಗಲ್ಲ ಎಂದು ಶಂಕ್ರಪ್ಪ ಹೇಳಿದ್ದರು. ಹಾಗಾಗಿ ನಿನ್ನೆ ಸಭೆ ಸೇರಿ 21,000 ದಂಡವನ್ನು ವಿಧಿಸಿದರು. ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ತಿಳಿಸಿದರು.