Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM

BIG NEWS : ಇನ್ಮುಂದೆ ಈ ಜನರು `ಟೋಲ್ ತೆರಿಗೆ’ ಪಾವತಿಸಬೇಕಾಗಿಲ್ಲ : ` NHAI’ ಮಹತ್ವದ ಆದೇಶ

01/08/2025 10:50 AM

ಗಮನಿಸಿ : ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್’ಗಳಿಗೆ 15 ದಿನ ರಜೆ, ಇಲ್ಲಿದೆ ಸಂಪೂರ್ಣ ಪಟ್ಟಿ |Bank Holidays

01/08/2025 10:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್‌: ‘ಸಖಿ ಒನ್ ಸ್ಟಾಪ್ ಸೆಂಟರ್’ನಲ್ಲಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು
KARNATAKA

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್‌: ‘ಸಖಿ ಒನ್ ಸ್ಟಾಪ್ ಸೆಂಟರ್’ನಲ್ಲಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

By kannadanewsnow5714/06/2024 7:30 AM

ಶಿವಮೊಗ್ಗ : ಕುಟುಂಬ, ಸಮುದಾಯ, ಕೆಲಸದ ಸ್ಥಳಗಳು, ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ನೆರವು ಒದಗಿಸಲು ಶಿವಮೊಗ್ಗದಲ್ಲಿ 24/7 ಕಾರ್ಯ ನಿರ್ವಹಿಸುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಆಲ್ಕೋಳ ವೃತ್ತದ ಬಳಿ ಸರ್ಕಾರಿ ಬಾಲಕರ ಬಾಲ ಮಂದಿರದ ಆವರಣದಲ್ಲಿ ನೊಂದ ಮಹಿಳೆಯರಿಗಾಗಿ ‘ಸಖಿ’ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.

ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು-ಹೆಣ್ಣುಮಕ್ಕಳಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರವು 2014–14 ರಲ್ಲಿ ಗೆಳತಿ ಚಿಕಿತ್ಸಾ ಘಟಕಗಳನ್ನು ಆರಂಭಿಸಿತು. 2019 ರಲ್ಲಿ ಈ ಕೇಂದ್ರಗಳನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ‘ಸಖಿ’ ಒನ್ ಸ್ಟಾಪ್ ಸೆಂಟರ್ ಎಂದು ಮರು ನಾಮಕರಣ ಮಾಡಿದೆ.

ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2000 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ-2012(ಪೋಕ್ಸೋ) ರ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು “ಸಖಿ ಒನ್ ಸ್ಟಾಪ್ ಸೆಂಟರ್‍ನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

‘ಸಖಿ’ ಒನ್ ಸ್ಟಾಪ್ ಸೆಂಟರ್ ಯಾವುದೇ ಜಾತಿ, ವರ್ಗ, ಧರ್ಮ, ಪ್ರದೇಶ, ಲೈಂಗಿಕ ದೃಷ್ಟಿಕೋನ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು(ಪೋಕ್ಸೋ), ಕೌಟುಂಬಿಕ ಕಲಹಗಳ ದೌರ್ಜನ್ಯ,ಮಾನಸಿಕ ಅಸ್ವಸ್ಥೆಯರು, 18 ವರ್ಷ ಮೇಲ್ಪಟ್ಟ ಪ್ರಾಪ್ತ ವಯಸ್ಕ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ವರದಕ್ಷಣೆ ಕಿರುಕುಳ, ಸೈಬರ್ ಅಪರಾಧ, ದ್ವಿಪತ್ನಿತ್ವ ಪ್ರಕರಣ,ಬಾಲ್ಯವಿವಾಹ, ಅಪಹರಣ ಪ್ರಕರಣ, ವಿಷ ಸೇವನೆ, ಮಾನಸಿಕ ಹಿಂಸೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದೆ.

ಒಂದೇ ಸೂರಿನಡಿ 5 ಸೌಲಭ್ಯಗಳು :

ನೊಂದವರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು ಈ ಐದು ಸೌಲಭ್ಯಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೆರವು ನೀಡಲಾಗುತ್ತದೆ.

ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ವೈದ್ಯಾಧಿಕಾರಿಗಳ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ತಜ್ಞರಿಂದ ಅಗತ್ಯ ಆಪ್ತ ಸಮಾಲೋಚನೆ ಮಾಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ದೂರು ನೀಡಿದ ಬಳಿಕ ಪೋಲೀಸ್ ಮಹಾನಿರ್ದೇಶಕರಿಂದ ನಿಯೋಜಿಸ್ಪಟ್ಟ ಇನ್‍ಸ್ಪೆಕ್ಟರ್ ದರ್ಜೆಯ ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಭೇಟಿ ನೀಡಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಸಂಬಂಧಪಟ್ಟ ಪೋಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆ ಅಥವಾ ಸರ್ಕಾರಿ ಗೃಹಗಳಲ್ಲಿ ಆಶ್ರಯ ಒದಗಿಸಿ ರಕ್ಷಣೆ ನೀಡಲಾಗುತ್ತದೆ. ಸಂತ್ರಸ್ತರು ನೇರವಾಗಿ ಕೇಂದ್ರಕ್ಕೆ ಬಂದು ದೂರು ನೀಡಬಹುದು.

ಶಿವಮೊಗ್ಗ ಜಿಲ್ಲೆ ‘ಸಖಿ’ ಒನ್ ಸ್ಟಾಪ್ ಸೆಂಟರ್‍ನಲ್ಲಿ 2019 ರಿಂದ ಇಲ್ಲಿಯವರೆಗೂ 1400 ಜನ ಮಹಿಳೆಯರು-ಹೆಣ್ಣುಮಕ್ಕಳು ದೂರು ನೀಡಿದ್ದಾರೆ. ಈ ದೂರುಗಳ ಪೈಕಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದೆ.

ಕೌಟುಂಬಿಕ ದೌರ್ಜನ್ಯ 776 ಪ್ರರಣಗಳು, ಅತ್ಯಾಚಾರ 135, ಲೈಂಗಿಕ ಅಪರಾಧ /ಕಿರುಕುಳ/ಹಲ್ಲೆ/ದೌರ್ಜನ್ಯ 41, ಆಸಿಡ್ ದಾಳಿ 1 , ಮಹಿಳೆ ಸಾಗಾಣಿಕೆ 1, ಲೈಂಗಿಕ ದುರುಪಯೋಗಕ್ಕೆ ಒಳಗಾದವರ ಸಂಖ್ಯೆ 107, ಬಾಲ್ಯ ವಿವಾಹ 76, ಕಾಣೆಯಾದ ಮತ್ತು ಅಪಹರಣ 76, ಸೈಬರ್ ಅಪರಾಧ 11, ವರದಕ್ಷಿಣೆ ಕಿರುಕುಳ 33, ಇನ್ನಿತರೆ ದೌರ್ಜನ್ಯಗಳು 144 ಪ್ರಕರಣಗಳು ಸೇರಿ ಒಟ್ಟು 1400 ಪ್ರಕರಣ ದಾಖಲಾಗಿದೆ.

ಈ ಪ್ರಕರಣಗಳಲ್ಲಿ ಈವರೆಗೆ 1179 ಸಂತ್ರಸ್ತರಿಗೆ ಕಾನೂನು ನೆರವು ಮತ್ತು ಸಮಾಲೋಚನೆ ನೀಡಲಾಗಿದ್ದು, 447 ವೈದ್ಯಕೀಯ ನೆರವು ನೀಡಲಾಗಿದೆ. ದೌರ್ಜನ್ಯಕ್ಕೊಳಗಾಗಿ ಮನೊರೋಗದಿಂದ ಬಳಲುತ್ತಿದ್ದ 1092 ಜನರನ್ನು ಸಮಾಲೋಚನೆಗೆ ಒಳಪಡಿಸಲಾಗಿದೆ. 476 ಜನರಿಗೆ ಪೋಲಿಸ್ ನೆರವು, 234 ಜನರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

ಸಖಿ ಕೇಂದ್ರವು 24/7 ಗಂಟೆ ಕೆಲಸ ಮಾಡುತ್ತದೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಇಲ್ಲಿ ಒಬ್ಬರು ಘಟಕ ಆಡಳಿತಾಧಿಕಾರಿ, ಒಬ್ಬರು ಆಪ್ತ ಸಮಾಲೋಚಕರು, ಇಬ್ಬರು ವಿಷಯ ನಿರ್ವಾಹಕರು, ಇಬ್ಬರು ಕಾನೂನು ಸಲಹೆಗಾರರು, ಭದ್ರತಾ ಸಿಬ್ಬಂದಿ ಹಾಗೂ ಸಹಾಯಕರು ಕಾರ್ಯ ನಿರ್ವಹಿಸುತ್ತಾರೆ.

ಸಂಪರ್ಕ ವಿಳಾಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಿ ಬಾಲಕರ ಬಾಲ ಮಂದಿರ ಆವರಣ,100 ಅಡಿ ರಸ್ತೆ, ಆಲ್ಕೋಳ,ಶಿವಮೊಗ್ಗ, ಸಖಿ ದೂರವಾಣಿ-08187-223055, ಉಪ ನಿರ್ದೇಶಕರ ಕಛೇರಿ :08182-295514 ಜಿಲ್ಲಾ ಮಕ್ಕಳ ರಕ್ಷಣಾ ಘಟಕ:08182-295709,ಉಚಿತ ಮಕ್ಕಳ ಸಹಾಯವಾಣಿ-1098, ಉಚಿತ ಮಹಿಳಾ ಸಹಾಯವಾಣಿ-181. ಸಂಪರ್ಕಿಸಬಹುದಾಗಿದೆ.

Another good news for women: 'Sakhi' will be available at one stop centre all these facilities ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ!
Share. Facebook Twitter LinkedIn WhatsApp Email

Related Posts

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM1 Min Read

BIG NEWS : ಧರ್ಮಸ್ಥಳದಲ್ಲಿ ಪಾನ್ ಕಾರ್ಡ್ & ಎಟಿಎಂ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

01/08/2025 10:31 AM1 Min Read

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕೌನ್ಸಿಲಿಂಗ್‌ ಮೂಲಕ 1300 ನೌಕರರ ವರ್ಗಾವಣೆ: ಪ್ರಿಯಾಂಕ್‌ ಖರ್ಗೆ

01/08/2025 10:29 AM2 Mins Read
Recent News

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM

BIG NEWS : ಇನ್ಮುಂದೆ ಈ ಜನರು `ಟೋಲ್ ತೆರಿಗೆ’ ಪಾವತಿಸಬೇಕಾಗಿಲ್ಲ : ` NHAI’ ಮಹತ್ವದ ಆದೇಶ

01/08/2025 10:50 AM

ಗಮನಿಸಿ : ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್’ಗಳಿಗೆ 15 ದಿನ ರಜೆ, ಇಲ್ಲಿದೆ ಸಂಪೂರ್ಣ ಪಟ್ಟಿ |Bank Holidays

01/08/2025 10:49 AM
post office

ಗಮನಿಸಿ: ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗೋದು ಇಲ್ಲ ಈ ಸೇವೆ, ಇನ್ನೂ ನೆನಪು ಮಾತ್ರ..!

01/08/2025 10:42 AM
State News
KARNATAKA

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

By kannadanewsnow0501/08/2025 10:50 AM KARNATAKA 1 Min Read

ಬೆಂಗಳೂರು : ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಪೂರೈಕೆಯಾಗುವ ತಾತಗುಣಿ ಜಲಚೇರಕ ಯಂತ್ರಗಾರ(ಪಂಪಿಂಗ್ ಹೌಸ್)ದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದಿಂದ ಆ.1ರಂದು(ಇಂದು)…

BIG NEWS : ಧರ್ಮಸ್ಥಳದಲ್ಲಿ ಪಾನ್ ಕಾರ್ಡ್ & ಎಟಿಎಂ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

01/08/2025 10:31 AM

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕೌನ್ಸಿಲಿಂಗ್‌ ಮೂಲಕ 1300 ನೌಕರರ ವರ್ಗಾವಣೆ: ಪ್ರಿಯಾಂಕ್‌ ಖರ್ಗೆ

01/08/2025 10:29 AM
Do this to solve enemy problems and debt problems

ಶತ್ರುಗಳ ತೊಂದರೆಗಳು ಮತ್ತು ಸಾಲದ ಸಮಸ್ಯೆಗಳನ್ನು ಪರಿಹರಿಸಲು ಹೀಗೆ ಮಾಡಿ

01/08/2025 10:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.