ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನ ಐದು ಫಲಾನುಭವಿ ಆಧಾರಿತ ಯೋಜನೆಗಳಡಿ ವಿವಿಧ ಸೌಲಭ್ಯ ಪಡೆಯಲು ಜಿಲ್ಲೆಯ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಅರ್ಜಿಗಳನ್ನು ಸೇವಾಸಿಂಧು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನವಾಗಿದೆ.
*ಯೋಜನೆಗಳು ಮತ್ತು ಬೇಕಾದ ದಾಖಲೆಗಳು:*
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ, ರೂ.20 ಬಾಂಡ್‍ನಲ್ಲಿ ನೀರಪೇಕ್ಷಣಾ ಪ್ರಮಾಣ ಪತ್ರ.
ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ: ಯುಡಿಐಡಿ ಕಾರ್ಡ್, ಚಾಲ್ತಿಯಲ್ಲಿರುವ ಎಲ್.ಎಲ್.ಆರ್./ಡಿ.ಎಲ್ ಪ್ರಮಾಣ ಪತ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ, ರೂ.20 ಬಾಂಡ್‍ನಲ್ಲಿ ನೀರಪೇಕ್ಷಣಾ ಪ್ರಮಾಣ ಪತ್ರ, ಕೆಲಸ/ಶೈಕ್ಷಣಿಕ ಪ್ರಮಾಣ ಪತ್ರ.
ಸಾಧನೆ ಸಲಕರಣೆ ಯೋಜನೆ: ಯುಡಿಐಡಿ ಕಾರ್ಡ್, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ.
ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಟೈಲರಿಂಗ್ ತರಬೇತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ.
ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ.
ಮೇಲ್ಕಂಡ ಯೋಜನೆಗಳಿಗೆ ಸೇವಾಸಿಂಧು, ಗ್ರಾಮ ಒನ್, ಬಳ್ಳಾರಿ ಒನ್ ಮತ್ತು ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ವೆಬ್‍ಸೈಟ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ/Sevಚಿsiಟಿಜhu/ಏಚಿಟಿಟಿಚಿಜಚಿ ಮೂಲಕ ಅರ್ಜಿ ಸಲ್ಲಿಸಿ, ಸ್ವೀಕೃತಿಯೊಂದಿಗೆ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಎಸ್.ಪಿ.ಸರ್ಕಲ್ ಹತ್ತಿರ ದೇವಿನಗರದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಅಥವಾ ದೂ.08392267886 ಹಾಗೂ ಜಿಲ್ಲೆಯ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಪರ್ಕ: ಬಳ್ಳಾರಿ-8880875620, ಕಂಪ್ಲಿ-7676038917, ಕುರುಗೋಡು-9538000887, ಸಿರುಗುಪ್ಪ-9743509698, ಸಂಡೂರು-9632052270 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.