ಬೆಂಗಳೂರು : ರಾಜ್ಯ ಸರ್ಕಾರದಿಂದ ʻಗೃಹಲಕ್ಷ್ಮಿʼ ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ನೀಡುತ್ತಿರುವ ಹಣವನ್ನು ಚಿಟ್‌ಫಂಡ್‌ಗೆ ವಿನಿಯೋಗ ಮಾಡಿಸುವುದಕ್ಕೆ ಮುಂದಾಗಲಿದೆ ಎನ್ನಲಾಗಿದೆ.
ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್‌ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಸರ್ಕಾರ ನೀಡುತ್ತಿರುವ ʻಗೃಹಲಕ್ಷ್ಮಿʼ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ (Chit Fund) ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ಚಿಂತನೆ ಮಾಡಿದೆ.
ಎಲ್ಲವೂ ಅಂದುಕೊಂಡ ರೀತಿ ಆದಲ್ಲಿ ಏಪ್ರಿಲ್‌ನಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಕಡಿಮೆ ಆದಾಯದ ಗುಂಪುಗಳು, ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಲ್ಲಿ ಜನಪ್ರಿಯವಾಗಿರುವ ಚಿಟ್ ಫಂಡ್ ಸದಸ್ಯರು ನಿರ್ದಿಷ್ಟ ಅವಧಿಗೆ ಪೂರ್ವನಿರ್ಧರಿತ ಮೊತ್ತವನ್ನು ಠೇವಣಿ ಮಾಡಲು ಒಪ್ಪುವುದನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಜೀವ ವಿಮಾ ನಿಗಮ (ಎಲ್ಐಸಿ) ಯಂತೆಯೇ, ಸರ್ಕಾರವು ‘ಉಳಿತಾಯ ಸಖಿಗಳನ್ನು’ ಏಜೆಂಟರಾಗಿ ನೇಮಿಸುತ್ತದೆ, ಅವರು ಚಿಟ್ ಫಂಡ್ ವ್ಯವಹಾರಕ್ಕಾಗಿ ಪ್ರತಿ ದಾಖಲಾತಿಗೆ ಪ್ರೋತ್ಸಾಹಕಗಳನ್ನು ಪಡೆಯುತ್ತಾರೆ ಎನ್ನಲಾಗಿದೆ.