Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

SHOCKING : ವಿಶ್ವದ 100 ಅತಿ ಬಿಸಿ ನಗರಗಳಲ್ಲಿ ಭಾರತದ್ದೇ 83 ನಗರಗಳು : ಬಿಸಿಲಾಘಾತಕ್ಕೆ ಜನರು ತತ್ತರ.!

29/04/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ಮಿನಿ ಟ್ರ್ಯಾಕ್ಟರ್’ ಖರೀದಿಗೆ ಶೇ.90 ಸಹಾಯಧನಕ್ಕೆ ಅರ್ಜಿ ಆಹ್ವಾನ
KARNATAKA

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ಮಿನಿ ಟ್ರ್ಯಾಕ್ಟರ್’ ಖರೀದಿಗೆ ಶೇ.90 ಸಹಾಯಧನಕ್ಕೆ ಅರ್ಜಿ ಆಹ್ವಾನ

By kannadanewsnow5716/11/2024 6:35 AM

ಬೆಂಗಳೂರು : ಪ್ರಸಕ್ತ(2024-25) ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವೀಡರ್, ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್‍ಸೆಟ್, ಪ್ಲೋರ್‍ಮಿಲ್, ಯಂತ್ರ ಚಾಲಿತ ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ(ಹೆಚ್‍ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ.

ಆಸಕ್ತ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಎರಡು ಭಾವಚಿತ್ರ, ರೂ.100 ರ ಛಾಪಾ ಕಾಗಗದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ನೀರು ಸಂಗ್ರಹಣಾ ರಚನೆ(ಕೃಷಿ ಹೊಂಡ), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್/ ಸೋಲಾರ್ ಪಂಪ್ ಸೆಟ್(ಅಪ್ ಟು 10 ಹೆಚ್‍ಪಿ) ಮತ್ತು ಬೆಳೆಗೆ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಘಟಕಗಳ ಸೌಲಭ್ಯಗಳನ್ನು ಸಾಮಾನ್ಯ ರೈತರಿಗೆ ಶೇ.80ರ ಸಹಾಯಧನದಲ್ಲಿ /ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ನೀಡಲಾಗುವುದು.
ಕೃಷಿ ಭಾಗ್ಯ ಯೋಜನೆಗೆ ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರ್‍ನಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ(ಕೆ ಕಿಸಾನ್ ಪೋರ್ಟಲ್‍ನಲ್ಲಿ ಭೌತಿಕವಾಗಿ ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು).

ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Another good news for the farmers of the state: Application invitation for 90% subsidy for purchase of mini tractor ರಾಜ್ಯದ ರೈತರಿಗೆ ಮತ್ತೊಂದು ಗುಡ್‌ನ್ಯೂಸ್‌: 4 ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲಭೂತ ಸೌಕರ್ಯ: ಇಂಧನ ಸಚಿವ ಕೆ.ಜೆ.ಜಾರ್ಜ್
Share. Facebook Twitter LinkedIn WhatsApp Email

Related Posts

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM1 Min Read

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM1 Min Read

BIG NEWS : ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

29/04/2026 1:42 PM2 Mins Read
Recent News

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

SHOCKING : ವಿಶ್ವದ 100 ಅತಿ ಬಿಸಿ ನಗರಗಳಲ್ಲಿ ಭಾರತದ್ದೇ 83 ನಗರಗಳು : ಬಿಸಿಲಾಘಾತಕ್ಕೆ ಜನರು ತತ್ತರ.!

29/04/2026 1:56 PM

BIG NEWS : ಉದ್ಯೋಗಸ್ಥ ಪತ್ನಿ ಪತಿಯಿಂದ `ಜೀವನಾಂಶ’ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

29/04/2026 1:47 PM
State News
KARNATAKA

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

By kannadanewsnow0529/04/2026 2:14 PM KARNATAKA 1 Min Read

ರಾಯಚೂರು : ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದದಲ್ಲಿ ತಮ್ಮನೇ ಅಣ್ಣನ ಮಗನನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಸಿಂಧನೂರು ತಾಲೂಕಿನ…

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

BIG NEWS : ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

29/04/2026 1:42 PM

BIG NEWS : ಶಿವಮೊಗ್ಗದಲ್ಲಿ NSUI ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ : ಕುವೆಂಪು ವಿವಿ ಕುಲಪತಿ ಕಚೇರಿ ಧ್ವಂಸ!

29/04/2026 1:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.