ಬೆಂಗಳೂರು : ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಹಬ್ಬ ಹರಿದಿನ, ಮದುವೆ/ಮದುವೆ ವಾರ್ಷಿಕೋತ್ಸವ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಷ್ಟ್ರೀಯ ಪ್ರಮುಖ ದಿನಗಳು, ರಾಜ್ಯ ಸ್ಥಾಪನೆಯ ದಿನಗಳು ಸೇರಿ ವಿಶೇಷ ದಿನಾಚರಣೆಗಳ ಸಂದರ್ಭ ವಿಶೇಷ ಭೋಜನ ಏರ್ಪಡಿಸಲು ಸರಕಾರ ಅವಕಾಶ ಕಲ್ಪಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಸೂಚಿತ “ವಿಶೇಷ ಭೋಜನ” (ತಿಥಿ ಭೋಜನ) ಪರಿಕಲ್ಪನೆಯು ಒಂದು ಸಮುದಾಯ ಭಾಗವಹಿಸುವಿಕೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎನ್ ಜಿ ಒ ಗಳು / ಕೈಗಾರಿಕೆಗಳು/ ವಾಣಿಜ್ಯ/ ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು, ಸರ್ಕಾರಿ ಮತು ಸರ್ಕಾರಿ ಅನುದಾನಿತ ಶಾಲೆಗಳಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಬ್ಬಗಳು, ಮದುವೆ ಮದುವೆ ವಾರ್ಷಿಕೋತ್ಸವಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಜ್ಯ ಸ್ಥಾಪನೆ ದಿನಗಳು, ರಾಷ್ಟ್ರೀಯ ಪ್ರಾಮುಖ್ಯತೆ ದಿನಗಳು ಮತ್ತು ಯಾವುದೇ ಇತರೆ ವಿಶೇಷ ಸಂದರ್ಭಗಳಲ್ಲಿ ಪೌಷ್ಠಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸುವುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಾ ಸದರಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಈ ಕೆಳಕಂಡಂತೆ ಮಾರ್ಗಸೂಚಿಯನ್ನು ನೀಡಿದೆ ಎಂದಿದ್ದಾರೆ.
ಹೀಗಿದೆ ವಿಶೇಷ ಭೋಜನ” (ತಿಥಿ ಭೋಜನ)ವನ್ನು ಆಯೋಜಿಸಲು ಈ ಕೆಳಗಿನ ಮಾರ್ಗಸೂಚಿಗಳನ್ನು ಗಮನಿಸಬೇಕು
1. ಆಹಾರ ಪದಾರ್ಥಗಳು:
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) 2013 ರ schedule || ರಲ್ಲಿ ಉಲ್ಲೇಖಿಸಿರುವಂತೆ ಯೋಜನೆಯ ಮಾನದಂಡಗಳಿಗೆ (ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ- 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಮತ್ತು ಹಿರಿಯ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ 750 ಕ್ಯಾಲೋರಿಗಳು ಮತ್ತು 20 ಗ್ರಾಂ ಪ್ರೋಟೀನ್) ಬದ್ಧವಾಗಿ ‘ತಿಥಿ ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು.
ಸ್ಥಳೀಯವಾಗಿ ಲಭ್ಯವಿರುವ ಹಸಿರು ಎಲೆಗಳ ತರಕಾರಿಗಳು, ಕಾಳುಗಳು/ದ್ವಿದಳ ಧಾನ್ಯಗಳು ಮತ್ತು ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿ ಅಳವಡಿಸಬೇಕು.
ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಪ್ರಮಾಣಿತ ಸುರಕ್ಷತಾ (Standard Safety measures) ಕ್ರಮಗಳನ್ನು ಗಮನಿಸಬೇಕು.
ಋತುಮಾನದ ಹಣ್ಣುಗಳನ್ನು ವಿಶೇಷ ಭೋಜನದ ಮೆನುವಿನಲ್ಲಿ ಸೇರಿಸಬಹುದು.
ಕುಡಿಯಲು ಮತ್ತು ಅಡುಗೆ ಮಾಡಲು ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು.
ತಪ್ಪಿಸಬೇಕಾದ ಆಹಾರ ಪದಾರ್ಥಗಳು:
ಜಂಕ್ (ನೂಡಲ್ಸ್, ಚಿಪ್ಸ್, ಚಾಕೊಲೇಟ್ ಇತ್ಯಾದಿ) ಮತ್ತು ವಿದ್ಯಾರ್ಥಿಗಳಿಗೆ ನೀಡಬಾರದು.
ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ
ಹಳಸಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಊಟವನ್ನು ಬಡಿಸುವ ಮೊದಲು ಶಿಕ್ಷಕರು/ಅಡುಗೆಯವರು ಊಟವನ್ನು ರುಚಿ ನೋಡಬೇಕು.
ಕೈ ತೊಳೆಯುವುದು ಮತ್ತು ಬಾಯಿಯ ಶುಚಿತ್ವಗಳನ್ನು ಉತ್ತಮ ಅಭ್ಯಾಸಗಳಾಗಿ ಉತ್ತೇಜಿಸಬೇಕು.
ಊಟದ ತಯಾರಿಕೆ, ಅಡುಗೆ ಮಾಡುವಾಗ ಮತ್ತು ಬಡಿಸುವಾಗ ಶುಚಿತ್ವ, ಸುರಕ್ಷತೆ ಮತ್ತು ನೈರ್ಮಲ್ಯದ ಮಾನದಂಡಗಳು ಪಾಲಿಸಬೇಕು.
ಸಮುದಾಯ ಭಾಗವಹಿಸುವಿಕೆ:
ಶಾಲೆಗಳ ಕಡೆಗೆ ಜವಾಬ್ದಾರಿ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಸಮುದಾಯದಲ್ಲಿ ಬೆಳೆಸಲು ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು.
ವಿಶೇಷ ಭೋಜನ (ತಿಥಿ ಭೋಜನ) ವನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಸರಿಯಾದ ವೇಳಾಪಟ್ಟಿಯನ್ನು ಸಿದ್ದಪಡಿಸಬೇಕು.
ಮೇಲ್ಕಂಡ ಮಾರ್ಗಸೂಚಿಯನ್ನು ಅನುಸರಿಸಿ ಶಾಲಾ ಹಂತದಲ್ಲಿ ವಿಶೇಷ ಭೋಜನ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಹಾಗೂ ಶಾಲಾ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಪೋಷಕಾಂಶಗಳಿರುವ ಪೂರಕ ಆಹಾರ ಪದಾರ್ಥಗಳನ್ನು ಪೋಷಕರು, ಸಮುದಾಯ ದಾನಿಗಳಿಂದ ಕೊಡುಗೆಯಾಗಿ ಕೊಡುವುದನ್ನು ಉತ್ತೇಜಿಸಲು ಅಗತ್ಯ ಕ್ರಮಕ್ಕಾಗಿ ಸೂಚಿಸಿದೆ. ಇದರೊಂದಿಗೆ ಲಗತ್ತಿಸಿದ ಅನುಬಂಧ ನಮೂನೆಗಳಲ್ಲಿ ಮಾಸಿಕ ವರದಿಯನ್ನು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳು ತಪ್ಪದೇ ನೀಡುವಂತೆ ಸೂಚಿಸಿದ್ದಾರೆ.