ಬೆಂಗಳೂರು; ನಗರದ ಸಂಚಾರ ದಟ್ಟಣೆಯನ್ನು ನೀಗಿಸಿ, ಉದ್ಯೋಗಿಗಳಿಗೆ ಸಕಾಲದಲ್ಲಿ ಕಚೇರಿ ತಲುಪಿ ಕೆಲಸ ಮಾಡುವಂತಾಗುತ್ತಿರುವುದು ನಮ್ಮ ಮೆಟ್ರೋ ಸೇವೆಯಿಂದಲೇ ಆಗಿದೆ. ಈಗಾಗಲೇ ಹಸಿರು, ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ನಡೆಯುತ್ತಿದೆ. ಈಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ರಿಚ್-5 ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಎಕ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಆರ್ಡಿಎಸ್ಒ ಅಧಿಕಾರಿಗಳು, ಇಂದಿನಿಂದ ರೀಚ್ 5 ಮಾರ್ಗದಲ್ಲಿ ಬೊಮ್ಮನಹಳ್ಳಿಯಿಂದ ಆರ್ವಿ-ರಸ್ತೆ ನಡುವೆ, ಆಸಿಲೇಷನ್ ಮತ್ತುಇಬಿಡಿ ಪ್ರಯೋಗಗಳನ್ನ ಪ್ರಾರಂಭಿಸಿದೆ ಎಂದಿದೆ.
ಈ ಪ್ರಾಯೋಗಿಕ ಸಂಚಾರ ಸುಮಾರು 12-14 ದಿನಗಳವರೆಗೆ ನಡೆಸಲಾಗುವುದು. ಆರ್ಡಿಎಸ್ಒ ಪ್ರಾಯೋಗಿಕ ವರದಿಯನ್ನು ಸಲ್ಲಿಸಿದ ನಂತರ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿ ಪಡೆಯಲಾಗುವುದು ಎಂಬುದಾಗಿ ತಿಳಿಸಿದೆ.
ಆರ್ಡಿಎಸ್ಒ ಅಧಿಕಾರಿಗಳು, ಇಂದಿನಿಂದ ರೀಚ್ 5 ಮಾರ್ಗದಲ್ಲಿಬೊಮ್ಮನಹಳ್ಳಿಯಿಂದ ಆರ್ವಿ-ರಸ್ತೆ ನಡುವೆ, ಆಸಿಲೇಷನ್ ಮತ್ತುಇಬಿಡಿ ಪ್ರಯೋಗಗಳನ್ನ ಪ್ರಾರಂಭಿಸಿ, ಸುಮಾರು 12-14 ದಿನಗಳವರೆಗೆನಡೆಸಲಾಗುವುದು. ಆರ್ಡಿಎಸ್ಒ ಪ್ರಾಯೋಗಿಕ ವರದಿಯನ್ನುಸಲ್ಲಿಸಿದ ನಂತರ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿಪಡೆಯಲಾಗುವುದು. pic.twitter.com/VNVHLCbtbL
— ನಮ್ಮ ಮೆಟ್ರೋ (@OfficialBMRCL) September 9, 2024
ರೈತರ ಗಮನಕ್ಕೆ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನ